ಸುದ್ದಿ ವಾಹಿನಿಗಳ ನಡೆ ಪ್ರಶ್ನಿಸಿದ ನಟಿ ಭಾವನಾ

137

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಟ ದರ್ಶನ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳ ವರದಿಗಾರರು ಚಿತ್ರರಂಗದವರು, ಸಾರ್ವಜನಿಕರು ಯಾರೇ ಸಿಕ್ಕರೂ ಸಾಕು ಲೊಗೋ ಹಿಡಿದು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಇದು ಎಷ್ಟರ ಮಟ್ಟಿಗೆ ಜನರಿಗೆ ಕಿರಿಕಿರಿಯಾಗಿದೆ ಎಂದರೆ ಲೊಗೋ ಹಿಡಿದುಕೊಂಡು ಹೋಗುವ ವರದಿಗಾರರ ಎದುರೆ ಪತ್ರಿಕಾ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ನಟಿ ಭಾವನಾಗೆ ಇದೆ ವಿಚಾರ ಕೇಳಿದಾಗ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎನ್ನುವುದರ ಜೊತೆಗೆ ಸುದ್ದಿ ವಾಹಿನಿಗಳ ಕೀಳುಮಟ್ಟದ ಅಪಪ್ರಚಾರ, ವೈಯಕ್ತಿಕ ನಿಂದನೆ ಬಗ್ಗೆ ಪ್ರಶ್ನಿಸಿದ್ದಾರೆ. ರೇಣುಕಾಸ್ವಾಮಿ ಅಮಾಯಕ ಎನ್ನುವಂತೆ ಬಿಂಬಿಸುವುದು ಬಿಡಬೇಕು. ಪ್ರಕರಣ ತನಿಖೆ ಹಂತದಲ್ಲಿ ಇರುವಾಗ ನಾವೇ ನ್ಯಾಯಾಧೀಶರಾಗಬಾರದು ಎಂದಿದ್ದಾರೆ.

ಪ್ರಾಮಾಣಿಕವಾಗಿ ಈ ಘಟನೆ ಪೂರ್ವದ ಟಿಆರ್ ಪಿ ಹಾಗೂ ಘಟನೆ ನಂತರದ ಟಿಆರ್ ಪಿ ಜನರ ಮುಂದೆ ಇಡಿ. ಹೆಚ್ಚಿಗೆ ಒಗ್ಗರಣೆ ಹಾಕಿ ಹೇಳುವುದನ್ನು ಬಿಡಿ ಎನ್ನುವುದು ಸೇರಿದಂತೆ ದೃಶ್ಯ ಮಾಧ್ಯಮಗಳ ಅತಿರೇಕದ ವರ್ತನೆ ಬಗ್ಗೆ ತೀಕ್ಷಣವಾಗಿ ಹೇಳುತ್ತಲೇ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದಿದ್ದಾರೆ.

ಆರೋಪಿಗಳ ಕುಟುಂಬಸ್ಥರ ಖಾಸಗಿತನವನ್ನು ಗೌರವಿಸದೆ ವಿಡಿಯೋ ಮಾಡುವುದು, ಅದನ್ನು ಪ್ರಶ್ನೆಸಿದರೆ ಶೆಡ್ ಗೆ ಬಾ ಎಂದು ಕಿಂಡಲ್ ಮಾಡುವುದನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಒಬ್ಬರ ಒಪ್ಪಿಗೆ ಇಲ್ಲದೆ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಕಾನೂನು ರೀತಿ ತಪ್ಪು. ಪ್ರಕರಣಕ್ಕೆ ಸಂಬಂಧವೇ ಇಲ್ಲದ ಅವರ ಕುಟುಂಬಸ್ಥರನ್ನು ವಿನಾಃಕಾರಣ ಕಿರುಕುಳ ನೀಡ್ತಿರುವುದನ್ನು ಖಂಡಿಸುತ್ತಿದ್ದು, ಕಾನೂನು ಅಡಿಯಲ್ಲಿ ಮಾಧ್ಯಮಗಳ ಮೇಲೂ ದೂರು ದಾಖಲಿಸಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇನೇ ಇದ್ದರೂ ಜವಾಬ್ದಾರಿಯುತ ಮಾಧ್ಯಮಗಳ ನಡೆ ಮಾತ್ರ ಅನುಮಾನದಿಂದ ನೋಡುವಂತೆ ಮಾಡಿರುವುದು ಮಾತ್ರ ಸತ್ಯ.




error: Content is protected !!