ಪತ್ರಕರ್ತರಿಗೆ ರಕ್ಷಣೆ ನೀಡಲು ನ್ಯಾಯವಾದಿಗಳ ಮನವಿ

79

ಪ್ರಜಾಸ್ತ್ರ ಸುದ್ದಿ

ಮುದ್ದೇಬಿಹಾಳ: ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಪತ್ರಕರ್ತರಿಗೆ  ಕೆಲವು ಸಮಾಜಘಾತಕ ಶಕ್ತಿಗಳು ಬೆದರಿಕೆ ಹಾಕುತ್ತಿದ್ದು, ವರದಿಗಾರರಿಗೆ ರಕ್ಷಣೆ ನೀಡಬೇಕು ಎಂದು ನ್ಯಾಯವಾದಿಗಳು ಮನವಿ ಸಲ್ಲಿಸಿದ್ದಾರೆ.

ಮಟ್ಕಾ, ಗಾಂಜಾ, ಮರಳು ಮಾಫಿಯಾ ಸೇರಿದಂತೆ ಅನೈತಿಕ ಚಟುವಟಿಕೆಗಳ ವಿರುದ್ಧ ಸುದ್ದಿ ಪ್ರಸಾರ ಮಾಡಿ ಅನ್ಯಾಯ, ಅಕ್ರಮ ವಿರುದ್ಧ ಶ್ರಮಿಸುತ್ತಿರುವ ವರದಿಗಾರರಿಗೆ ಜೀವ ಬೆದರಿಕೆ ಹಾಕುತ್ತಿರುವುದು ಖಂಡನೀಯ. ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮದವರಿಗೆ ರಕ್ಷಣೆ ನೀಡಬೇಕೆಂದು ಹೇಳಿ ಮುದ್ದೇಬಿಹಾಳ ಶಿರಸ್ತೇದಾರ್ ಎಂ.ಎ ಬಾಗೇವಾಡಿ ಅವರಿಗೆ ತಾಲೂಕಿನ ನ್ಯಾಯವಾದಿಗಳು ಮನವಿ ಸಲ್ಲಿಸಿದ್ದಾರೆ.

ಈ ವೇಳೆ ನ್ಯಾಯವಾದಿಗಳಾದ ಪಿ.ಬಿ ಮಾತಿನ್, ಆರ್. ಎಸ್ ಬಿರಾದಾರ, ಟಿ.ಬಿ ಮ್ಯಾಗೇರಿ, ಸಿ.ಬಿ ಬಿದರಿ, ವೈ.ಕೆ ಸಾಸನೂರ್, ಎಂ.ಬಿ ನರಸಲಗಿ, ಎಂ.ಎಲ್ ರಿಸಾಲದಾರ್, ಎಸ್ಪಿ ಬಿರಾದಾರ, ಪಿ.ಎಲ್ ಬೊಮ್ಮನಗಿ, ಆರ್.ಎ ಸಾಲಿ ಉಪಸ್ಥಿತರಿದ್ದರು.




error: Content is protected !!