ಕೊಹ್ಲಿ, ರೋಹಿತ್ ಸ್ಥಾನ ತುಂಬಲು ಎರಡ್ಮೂರು ವರ್ಷ ಬೇಕು: ರೋಜರ್ ಬಿನ್ನಿ

86

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶನಿವಾರ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 7 ರನ್ ಗಳ ರೋಚಕ ಜಯ ಗಳಿಸಿ 2ನೇ ಬಾರಿ ಚುಟುಕು ಚಾಂಪಿಯನ್ಸ್ ಹಾಗೂ 4ನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಆಗಿದ್ದಾರೆ. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಇದು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕೊಹ್ಲಿ ಹಾಗೂ ರೋಹಿತ್ ಸ್ಥಾನವನ್ನು ತುಂಬಲು ಇನ್ನು ಎರಡ್ಮೂರು ವರ್ಷ ಬೇಕಾಗುತ್ತೆ. ಸಾಕಷ್ಟು ಪ್ರತಿಭಾವಂತರು ಕ್ರಿಕೆಟಿಗೆ ಬರುತ್ತಿದ್ದಾರೆ. ಆದರೆ, ಇವರಿಬ್ಬರ ಸ್ಥಾನ ತುಂಬಲು ಸಮಯ ತೆಗೆದುಕೊಳ್ಳುತ್ತೆ ಎಂದಿದ್ದಾರೆ.

1983ರಲ್ಲಿ ನಮ್ಮನ್ನು ತುಂಬಾ ಕೆಳ ಮಟ್ಟದಲ್ಲಿ ನೋಡುತ್ತಿದ್ದರು. ವಿಶ್ವಕಪ್ ಗೆಲ್ಲುವ ತಂಡವೆಂದು ಪರಿಗಣಿಸಿಯೇ ಇರಲಿಲ್ಲ. ಆದರೆ, ಅಂದು ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಗೆದ್ದು, ಆ ಹಣೆಪಟ್ಟಿ ಹೋಯಿತು. ಈಗ ಯಾವುದೇ ಸರಣಿಯಾದರೂ ಭಾರತ ಗೆಲ್ಲಬಹುದು ಎಂದು ಎಲ್ಲರೂ ಹೇಳುತ್ತಾರೆ ಅಂತಾ ಹೇಳಿದ್ದಾರೆ.

35 ವರ್ಷದ ವಿರಾಟ್ ಕೊಹ್ಲಿ 125 ಟಿ-20 ಪಂದ್ಯಗಳಲ್ಲಿ 117 ಇನ್ನಿಂಗ್ಸ್ ಆಡಿದ್ದಾರೆ. ಇದರಲ್ಲಿ 1 ಶತಕ, 38 ಅರ್ಧ ಶತಕ ಗಳಿಸಿದ್ದಾರೆ. ಅಜೇಯ 122 ರನ್ ಅಧಿಕ ಸ್ಕೋರ್ ಆಗಿದೆ. 48.7 ಆವರೇಜ್ ನಲ್ಲಿ 4,188 ರನ್ ಗಳಿಸಿದ್ದಾರೆ.

37 ವರ್ಷದ ರೋಹಿತ್ ಶರ್ಮಾ 159 ಟಿ-20 ಪಂದ್ಯಗಳಲ್ಲಿ 4,231 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕ, 32 ಅರ್ಧ ಶತಕಗಳಿವೆ.




error: Content is protected !!