ನೀಟ್ ಅಕ್ರಮದ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳ ಸಭಾತ್ಯಾಗ

90

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶವ್ಯಾಪಿ ಸಾಕಷ್ಟು ಚರ್ಚೆಗೆ ಕಾರಣವಾದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ನೀಟ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಚರ್ಚೆಗೆ ವಿಪಕ್ಷಗಳು ಲೋಕಸಭೆ ಅಧಿವೇಶನದಲ್ಲಿ ಒತ್ತಾಯಿಸಿವೆ.

ಶುಕ್ರವಾರ ಸಹ ಇದೇ ಕಾರಣಕ್ಕೆ ವಿಪಕ್ಷಗಳು ಆಗ್ರಹಿಸಿದ್ದವು. ಆಗ ಸ್ಪೀಕರ್ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದ್ದರು. ಇಂದು ಮತ್ತೆ ಕಲಾಪ ಶುರುವಾಗಿದೆ. ಆಗ ನೀಟ್ ಅಕ್ರಮದ ಚರ್ಚೆಗೆ ಪ್ರತ್ಯೇಕ ಒಂದು ದಿನ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಬಳಿಕ ಚರ್ಚೆಗೆ ಅವಕಾಶ ನೀಡಿ ಎಂದು ಕೇಳಿದರು. ಆದರೆ, ಸ್ಪೀಕರ್ ಓಂ ಬರ್ಲಾ ಅವರು ವಂದನಾ ನಿರ್ಣಯದ ಬಳಿಕ ಯಾವುದೇ ಚರ್ಚೆಗೆ ಅವಕಾಶವಿಲ್ಲವೆಂದು ಹೇಳಿದರು. ಹೀಗಾಗಿ ಚರ್ಚೆಗೆ ಸರ್ಕಾರದಿಂದ ಭರವಸೆ ನೀಡುವಂತೆ ಒತ್ತಾಯಿಸಿ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.




error: Content is protected !!