ವಿದ್ಯಾರ್ಥಿನಿಯರು ಈ ಸ್ಥಿತಿಗೆ ಯಾರು ಕಾರಣ?

371

ಹುಬ್ಬಳ್ಳಿ: ವೈದ್ಯರು ಮಾಡಿದ ಎಡವಟ್ಟಿನಿಂದ ಶಾಲಾ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಟಿ ಡಿ  ಇಂಜೆಕ್ಷನ್‌‌ ರಿಯಾಕ್ಷನ್ ನಿಂದಾಗಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

ಸುಮಾರು 27ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ವಿದ್ಯಾರ್ಥಿನಿಯರನ್ನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಊಟಕ್ಕಿಂತ ಮುಂಚೆಯೇ ಮಕ್ಕಳಿಗೆ ಟಿಡಿ ಇಂಜೆಕ್ಷನ್ ಕೊಟ್ಟಿದ್ದಾರೆ. ಈ ರೀತಿ ಮಾಡಿದ ಎಡವಟ್ಟಿನಿಂದಾಗಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.

ಗಂಟಲು ನೋವು, ಕೈಕಾಲು ನೋವು ಸೇರಿದಂತೆ ಹಲವು ರೋಗ ನಿವಾರಣೆಗಾಗಿ ನೀಡಲಾಗುವ ಇಂಜೆಕ್ಷನ್ ಮಕ್ಕಳಿಗೆ ನೀಡುವ ಮೂಲಕ ವೈದ್ಯರು ಎಡವಟ್ಟು ಮಾಡಿದ್ದಾರೆ ಎಂದು ಪಾಲಕರು ಸಹ ಆರೋಪಿಸಿದ್ದಾರೆ. ಶಾಲೆಯಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದ ವೇಳೆ ಈ ಅನಾಹುತ ಸಂಭವಿಸಿದೆ ಅಂತಾ ಹೇಳಲಾಗ್ತಿದೆ.




error: Content is protected !!