ಹಾಸ್ಯ ನಟ ಬುಲೆಟ್ ಪ್ರಕಾಶ ವಿಧಿವಶ

439

ಸ್ಯಾಂಡಲ್ ವುಡ್ ಅಂಗಳದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ ವಿಧಿವಶರಾಗಿದ್ದಾರೆ. 44 ವರ್ಷದ ಕಾಮಿಡಿ ನಟ ಬುಲೆಟ್ ಪ್ರಕಾಶ, ಖಾಸಗಿ ಆಸ್ಪತ್ರೆಯಲ್ಲಿ ಸಂಜೆ ಸುಮಾರು 4.45ಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ನಟ ಬುಲೆಟ್ ಪ್ರಕಾಶ, ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಚಿಕಿತ್ಸೆ ಪಡೆದಿದ್ರು ಅಂತಾ ಹೇಳಲಾಗ್ತಿದೆ. ಇದು ಸಹ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ನಟ ಬುಲೆಟ್ ಪ್ರಕಾಶ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

ಮಗಳು ಹಾಗೂ ಮಗನೊಂದಿಗೆ ಬುಲೆಟ್ ಪ್ರಕಾಶ

ಏಪ್ರಿಲ್ 2, 1976ರಲ್ಲಿ ಜನಿಸಿದ ಪ್ರಕಾಶ, 1999ರಲ್ಲಿ ಬಣ್ಣದ ಲೋಕಕ್ಕೆ ಬಂದ್ರು. ಆದ್ರೆ, 2002ರಲ್ಲಿ ಮೊದಲ ಬಾರಿಗೆ ಧ್ರುವ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು. ಇಲ್ಲಿಯವರೆಗೂ ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿದೆ ಇದೀಗ ಸಾವನ್ನಪ್ಪಿದ್ದಾರೆ. ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಹತ್ತವರನ್ನ ಅಗಲಿದ್ದಾರೆ.




error: Content is protected !!