ಅಂದು ಹಾಡಿ ಹೊಗಳಿದ ಚಿತ್ರರಂಗದವರ, ರಾಜಕಾರಣಿಗಳ ಪಾಲಿಗೆ ಇಂದು ವಿಲನ್!

106

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಅವರ ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಜನರ ಬಂಧನವಾಗಿದೆ. ಕಳೆದ ಎರಡು ವಾರಗಳಿಂದ ಪೊಲೀಸರ ಅತಿಥಿಗಳಾಗಿದ್ದಾರೆ. ಕೊಲೆಯಾದ ವ್ಯಕ್ತಿ ಅಶ್ಲೀಲ ಮೆಸೇಜ್, ಫೋಟೋ ಕಳಿಸಿದ ಕಾರಣಕ್ಕೆ ದರ್ಶನ್ ಅಂಡ್ ಟೀಂ ಕೊಲೆ ಮಾಡಿರುವ ಆರೋಪ ಹೊತ್ತಿದೆ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ ಮೇಲೆ ಯಾರ ಪಾತ್ರ ಎಷ್ಟಿದೆ? ಕೋರ್ಟ್ ಯಾವ ತೀರ್ಪು ನೀಡುತ್ತೆ ಅನ್ನೋದು ತಿಳಿಯಲಿದೆ.

ಘಟನೆಯ ಬಳಿಕ ಸಾಕಷ್ಟು ಜನರು ಹೇಳಿಕೆಗಳನ್ನು ನೀಡಿದರು. ಈ ವಿಚಾರ ಬಯಲಿಗೆ ಬರುವ ಕ್ಷಣದವರೆಗೂ ಯಾರು ದರ್ಶನರನ್ನು ಹಾಡಿ ಹೊಗಳುತ್ತಿದ್ದರೋ ಅವರೆಲ್ಲ ಈಗ ಕಟು ಮಾತುಗಳನ್ನಾಡುತ್ತಿದ್ದಾರೆ. ಹಿಂದಿನ ಕಹಿ ಘಟನೆಗಳನ್ನು ಮುಂದೆ ಮಾಡಿ ದರ್ಶನ್ ಇರುವುದೆ ಕೆಟ್ಟ ವ್ಯಕ್ತಿ ಎನ್ನುವಂತೆ ಬಿಂಬಿಸಲಾಗುತ್ತಿದೆ. ಮಾಧ್ಯಮದವರಂತೂ ಜ್ವಾಲಾಮುಖಿಯಂತೆ ಬೆಂಕಿ ಉಗುಳುತ್ತಿದ್ದಾರೆ.

ದರ್ಶನ್ ಜೊತೆ ಇದ್ದಾಗ, ಇಲ್ಲದಿದ್ದಾಗ ಅವರ ಗುಣಗಾನ ಮಾಡುತ್ತಿದ್ದ ಚಿತ್ರರಂಗದವರು, ರಾಜಕೀಯ ವಲಯದ ಆಪ್ತರ ವರ್ಸೆಗಳು ಬದಲಾಗಿವೆ. ಈ ಪ್ರಕರಣದಲ್ಲಿ ನಡೆದಿರಬಹುದಾದ ತಪ್ಪಿನ ಕುರಿತು ಮಾತನಾಡುವುದಕ್ಕಿಂತ ಹೆಚ್ಚಾಗಿ ದರ್ಶನ್ ಕೆಟ್ಟವನು, ಕ್ರೂರಿ, ಕೊಲೆಗಾರ, ವಿಕೃತ ಮನಸ್ಸಿನವನು, ರಾಕ್ಷಸ ಗುಣದವನು ಎಂದೆಲ್ಲ ಹೇಳುವ ಮೂಲಕ ತೀವ್ರ ವಾಗ್ದಾಳಿ ನಡೆಸಲಾಗುತ್ತಿದೆ. ಕೋರ್ಟ್ ಕ್ಕಿಂತ ಮೊದಲೇ ಇವರೆ ಜೀವಾವಧಿ ಶಿಕ್ಷೆ ತೀರ್ಪು ನೀಡಿದವರಂತೆ ಮಾತನಾಡುತ್ತಿದ್ದಾರೆ. ಇದೆಲ್ಲದರಿಂದ ಯಾರೇ ಆಗಲಿ ಕಲಿಯಬೇಕಾದ ಪಾಠ, ನಮ್ಮ ಸಾಧನೆ ನಮ್ಮಲ್ಲಿ ವಿನಯ ಬೆಳಸಬೇಕೆ ಹೊರತು ಕ್ರೋಧ, ಅಂಹಕಾರ, ಮೃಗೀಯ ಗುಣಗಳನ್ನು ಬೆಳೆಸಬಾರದು ಹಾಗೂ ನಮ್ಮ ಸುತ್ತಲಿನ ಸಂಗ ಹೇಗಿರಬೇಕು ಎನ್ನುವುದನ್ನು ಕಲಿಯಬೇಕು.




error: Content is protected !!