ನಂದಿ ಗ್ರಾಮದ ಸಂಚಿಗೆ ತಕ್ಕ ಉತ್ತರ: ಮಮತಾ ಬ್ಯಾನರ್ಜಿ

237

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಭವಾನಿಪುರ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೇವಾಲ್ ವಿರುದ್ಧ 58,835 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ ರೂಪಿಸಿದ್ದ ಸಂಚಿಗೆ ಭವಾನಿಪುರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನನಗೆ ಮತ ನೀಡಿದ ಜನತೆಗೆ ಹಾಗೂ 6 ತಿಂಗಳೊಳಗೆ ಚುನಾವಣೆ ನಡೆಸಲು ಅವಕಾಶ ನೀಡಿದ ಚುನಾವಣೆ ಆಯೋಗಕ್ಕೆ ಧನ್ಯವಾದಗಳು ಎಂದರು.




error: Content is protected !!