ಸೈಕ್ಲಿಂಗ್ ಮಾಡುವಾಗ್ಲೇ ಬೀಳಗಿ ಮಾಜಿ ಶಾಸಕರ ಪುತ್ರ ನಿಧನ

558

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಸೈಕ್ಲಿಂಗ್ ಮಾಡುವಾಗ್ಲೇ ಹೃದಯಾಘಾತದಿಂದ ವಿನೋದ ಪಾಟೀಲ ಎಂಬುವರು ಸಾವನ್ನಪ್ಪಿದ ಘಟನೆ ಬಾದಾಮಿ ಹತ್ತಿರ ನಡೆದಿದೆ. 100 ಕಿಲೋ ಮೀಟರ್ ಸೈಕ್ಲಿಂಗ್ ಮಾಡುತ್ತಿರುವಾಗ ಈ ಅನಾಹುತ ನಡೆದಿದೆ.

ಸುಮಾರು 48ರ ಆಸುಪಾಸಿನ ವಿನೋದ ಪಾಟೀಲ, ಬೀಳಗಿಯ ಮಾಜಿ ಶಾಸಕ ಎಸ್.ಎಸ್ ಪಾಟೀಲರ ಮಗನಾಗಿದ್ದಾರೆ. ಇವರು ಬೀಳಗಿ ಪಟ್ಟಣದ ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗ ಮಾಡ್ತಿದ್ದು, ಬಾಗಲಕೋಟೆ ಸೈಕ್ಲಿಂಗ್ ಕ್ಲಬ್ ಸದಸ್ಯರಾಗಿದ್ರು.

ನಿನ್ನೆಯಷ್ಟೇ 70 ಕಿಲೋ ಮೀಟರ್ ಸೈಕ್ಲಿಂಗ್ ಮಾಡಿ ಸೆಂಚುರಿ ಮಿಸ್ ಮಾಡಿದೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ರಂತೆ. ಇಂದು ಭಾನುವಾರ ಆದ ಕಾರಣ, 100 ಕಿಲೋ ಮೀಟರ್ ಕ್ರಮಿಸಲು ಹೋದಾಗ ಈ ಘಟನೆ ನಡೆದಿದೆ. ಇವರ ಸಾವಿಗೆ ವಿಜಯಪುರ ಸೈಕ್ಲಿಂಗ್ ಗ್ರೂಪ್ ಹಾಗೂ ಸೈಕ್ಲಿಂಗ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.




error: Content is protected !!