ಬಿಟೌನ್ ಕಾಮಕಾಂಡ: ನಟ, ನಟಿ, ನಿರ್ದೇಶಕರಿಗೆ ನೋಟಿಸ್

438

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪ್ರಿನ್ಸ್ ನರುಲಾ

ಸಿನಿಮಾ ರಂಗ ಅನ್ನೋದು ರಂಗೀನ್ ದುನಿಯಾ. ಗ್ಲಾಮರ್ ಇಲ್ಲಿನ ಬಂಡವಾಳ. ಹೀಗಾಗಿ ಅದನ್ನ ಬಳಸಿಕೊಂಡು ಅನೇಕರು ಮೇಲೆ ಬರುತ್ತಾರೆ. ಕೆಲವರು ಪ್ರತಿಭೆಯಿಂದ ಮೇಲೆ ಬರ್ತಾರೆ. ಇನ್ನು ಕೆಲವರು ರಾಜಿಯಾಗುವ ಮೂಲಕ ಮಿಂಚುತ್ತಾರೆ. ಹೀಗಾಗಿಯೇ ಚಿತ್ರರಂಗದಲ್ಲಿ ಆಗಾಗ ಲೈಂಗಿಕ ಕಿರುಕುಳ, ಲೈಂಗಿಕವಾಗಿ ಬಳಸಿಕೊಂಡಿರುವ ಆಪ್ ದಿ ಸ್ಕ್ರೀನ್ ವಿಚಾರ ಹೊರ ಬರುತ್ತವೆ.

ಇದೀಗ ಬಾಲಿವುಡ್ ನ ಕೆಲ ನಟ, ನಟಿಯರು, ನಿರ್ದೇಶಕರ ವಿರುದ್ಧ ಮಹಿಳಾ ಆಯೋಗ ನೋಟಿಸ್ ನೀಡಿದೆ. ಕಾಮಕಾಂಡ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮಹೇಶ ಭಟ್, ನಟಿಯರಾದ ಇಶಾ ಗುಪ್ತಾ, ಊರ್ವಶಿ ರೌತೆಲಾ, ಮೌನಿ ರಾಯ್, ನಟ ಪ್ರಿನ್ಸ್ ನರುಲಾ ಅವರಿಗೆ ನೋಟಿಸ್ ನೀಡಲಾಗಿದೆ.

ಮಹೇಶ ಭಟ್

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯೋಗಿತಾ ಭಯಾನಾ, ಮಾಡಲಿಂಗ್ ಕಾರ್ಯಕ್ರಮಗಳನ್ನ ಆಯೋಜನೆ ಮಾಡ್ತಾ, ಜಾಹೀರಾತು ಇವೆಂಟ್ ನಡೆಸ್ತಿರುವ ಸನ್ನಿ ವರ್ಮಾ ಎಂಬಾತ ಹೆಣ್ಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಳ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಸಹ ಬಿಡುಗಡೆ ಮಾಡಿದ್ದಾರೆ. ಸನ್ನಿ ವರ್ಮಾ ನಡೆಸ್ತಿದ್ದ ಇವೆಂಟ್ ಗಳಿಗೆ ನಿರ್ದೇಶಕ, ನಿರ್ಮಾಪಕ ಮಹೇಶ ಭಟ್, ನಟಿಯರಾದ ಇಶಾ ಗುಪ್ತಾ, ಊವರ್ಶಿ ರೌತೆಲಾ, ಮೌನಿ ರಾಯ್ ಸೇರಿದಂತೆ ಅನೇಕರು ಬರ್ತಿದ್ರು ಮತ್ತು ಜಾಹೀರಾತಿನಲ್ಲಿ ಕಾಣಿಸಿಕೊಳ್ತಿದ್ರು.

ಈ ನಟ, ನಟಿಯರಿಗೂ ಆರೋಪಿಗೂ ಲಿಂಕ್ ಇದೆ ಅನ್ನೋ ಕಾರಣಕ್ಕೆ ಮಹಿಳಾ ಆಯೋಗ ನೋಟಿಸ್ ನೀಡಿದೆ. ನೋಟಿಸ್ ಸಂಬಂಧ ಹಾಜರಾಗದೆ ಹೋದ್ರೆ ಕಾನೂನು ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಇತ್ತೀಚೆಗೆ ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಸಹ ಅವಕಾಶಕ್ಕಾಗಿ ನಾನು ಯಾರೊಂದಿಗೆ ರಾಜಿಯಾಗಿಲ್ಲ. ಯಾವ ನಟರೊಂದಿಗೆ ಮಲಗಿಲ್ಲವೆಂದು ಹೇಳಿದ್ದು ಸಹ ವೈರಲ್ ಆಗಿದೆ. ಇಂಥಾ ಘಟನೆಗಳಿಂದ ಸಿನಿಮಾ ಮಂದಿ ಅಂದ್ರೆ ಜನರಲ್ಲಿ ಒಳ್ಳೆಯ ಭಾವನೆ ಮರೆಯಾಗ್ತಿದೆ ಅನ್ನೋದು ಮಾತ್ರ ಸತ್ಯ.




error: Content is protected !!