ಪತ್ರಿಕೋದ್ಯಮಿ, ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

140

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್: ಖ್ಯಾತ ಪತ್ರಿಕೋದ್ಯಮಿ, ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್(87) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯ ಕಾರಣಕ್ಕೆ ಸ್ಟಾರ್ ಆಸ್ಪತ್ರೆಗೆ ದಾಖಲಾಗಿದ್ದರು.

ಇಂದು ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ಪತ್ರಿಕೋದ್ಯಮ ಬಳಗ, ಸಿನಿ ರಂಗದವರು ಹಾಗೂ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈನಾಡು ಪತ್ರಿಕೆ, ಈಟಿವಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ಸಾಕಷ್ಟು ಕ್ರಾಂತಿ ಮಾಡಿದ್ದರು. ನೂರಾರು ಎಕರೆ ಪ್ರದೇಶದಲ್ಲಿ ರಾಮೋಜಿ ಫಿಲಂ ಸಿಟಿ ಸ್ಥಾಪಿಸುವ ಮೂಲಕ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದರು. ಅಲ್ಲದೇ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದರು.




error: Content is protected !!