ಬಿಎಸ್ವೈಗೆ ಟೆನ್ಷನ್…

411

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಚರ್ಚೆಯಾಗ್ತಿರುವುದೇ ಮೀಸಲಾತಿ ವಿಚಾರ. ಇದು ಒಂದು ಸಮುದಾಯದ ಕೂಗು ಆಗಿದ್ರೆ ರಾಜ್ಯ ಸರ್ಕಾರಕ್ಕೆ ಇಷ್ಟೊಂದು ತಲೆನೋವು ಆಗ್ತಿರ್ಲಿಲ್ಲ. ಆದ್ರೆ, ಹಲವು ಸಮುದಾಯಗಳು ತಮ್ಗೆ ಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಸಿವೆ.

ಕುರುಬ ಸಮುದಾಯ ಎಸ್ಟಿ ನೀಡಬೇಕು ಅನ್ನೋ ಹೋರಾಟ ನಡೆಸಿದೆ. ತಳವಾರ ಸಮಾಜಕ್ಕೆ ಕೇಂದ್ರದಿಂದ ಪರಿಶಿಷ್ಟ ಪಂಗಡ ಅನ್ನೋ ಜಾತಿ ಪ್ರಮಾಣ ನೀಡಬೇಕು ಅನ್ನೋ ಆದೇಶ ಬಂದಿದ್ರೂ, ರಾಜ್ಯ ಸರ್ಕಾರ ನೀಡದೆ ಇರುವುದರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಕಾಡುಗೊಲ್ಲ ಸಮುದಾಯದವರು ಸಹ ಎಸ್ಟಿ ಮೀಸಲಾತಿ ನೀಡಬೇಕು ಅಂತಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ನೀಡಬೇಕೆಂದು ಹೋರಾಟ.

ಹೀಗೆ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸ್ತಿವೆ. ಇದರ ಹೊತ್ತಿನಲ್ಲಿ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಉಪ ಚುನಾವಣೆ, ಬಿ.ನಾರಾಯಣರಾವ ನಿಧನದಿಂದಾಗಿ ಬಸವಕಲ್ಯಾಣ, ಪ್ರತಾಪಗೌಡ ಪಾಟೀಲ ರಾಜೀನಾಮೆಯಿಂದಾಗಿ ಮಸ್ಕಿ ಹಾಗೂ ಎಂ.ಸಿ ಮನಗೂಳಿ ನಿಧನದಿಂದಾಗಿ ಸಿಂದಗಿ ವಿಧಾನಸಭಾ ಉಪ ಚುನಾವಣೆ ನಡೆಯಬೇಕಿದೆ. ಈ ವೇಳೆ ಮೀಸಲಾತಿಗಾಗಿ ಹೋರಾಟ ಮಾಡ್ತಿರುವವರು ಸರ್ಕಾರದ ವಿರುದ್ಧ ತಿರುಗಿ ಬೀಳ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

ಉಪ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಮೂಲಕ 2023ಕ್ಕೆ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಎಚ್ಚರಿಕೆ ನೀಡುವ ಕೆಲಸವಾಗುತ್ತಾ ಅನ್ನೋ ಕುತೂಹಲ ಸಹ ಮೂಡಿದೆ. ಹೀಗಾಗಿ ಸಧ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮೀಸಲಾತಿ ಟೆನ್ಷನ್ ಜೋರಾಗಿದ್ದು, ಮೀಸಲಾತಿ ಬೇಡಿಕೆ ಇಟ್ಟಿರುವ ಸಮುದಾಯಗಳಿಗೆ ಎಷ್ಟರ ಮಟ್ಟಿಗೆ ನ್ಯಾಯ ಕೊಡಿಸ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.




error: Content is protected !!