‘ವಾಲ್ಮೀಕಿ ನಿಗಮ ಹಗರಣದ ತನಿಖೆ ಸಿಬಿಐ ವಹಿಸಿಕೊಂಡಿದೆ’

63

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಯಿಂದ ಮನವಿ ಬಂದ ಬಳಿಕ ತನಿಖೆ ಹಸ್ತಾಂತರಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಯೂನಿಯನ್ ಬ್ಯಾಂಕ್ ನ ಪ್ರಧಾನ ಕಚೇರಿ ಮುಂಬೈನಲ್ಲಿದ್ದು, ಬೆಂಗಳೂರಿನ ಎಂಜಿ ರೋಡ್ ನಲ್ಲಿರುವ ತನ್ನ ಶಾಖೆಯನ್ನು ಒಳಗೊಂಡು ವಾಲ್ಮೀಕಿ ನಗಮದಲ್ಲಿ ನಡೆದ ಹಗರಣದ ತನಿಖೆ ನಡೆಸುವಂತೆ ಸಿಬಿಐಗೆ ದೂರು ಸಲ್ಲಿಸಿದೆ. ಈ ಸಂಬಂಧ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

88 ಹಣ ಅಕ್ರಮ ವರ್ಗಾವಣೆ ಸಂಬಂಧ ಮೂವರು ಉನ್ನತ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬ್ಯಾಂಕ್ ನಲ್ಲಿ 3 ಕೋಟಿಗೂ ಹೆಚ್ಚು ಹಣದ ಅಕ್ರಮ ಕಂಡು ಬಂದರೆ ಸಿಬಿಐ ಸ್ವಯಂ ಪ್ರೇರತವಾಗಿ ತನಿಖೆ ನಡೆಸಬಹುದು ಅನ್ನೋದು ಕೇಂದ್ರ ಸರ್ಕಾರದಲ್ಲಿ ನಿಯಮವಿದೆ ಅಂತಾ ಹೇಳಿದರು.




error: Content is protected !!