ಕಲಬುರಗಿಯಲ್ಲಿ ಕರೋನಾದಿಂದ ಸಾವು: 46 ಮಂದಿ ಮೇಲೆ ನಿಗಾ

379

ಕಲಬುರಗಿ: ನಗರದ 76 ವರ್ಷದ ಮಹ್ಮದ ಹುಸೇನ ಸಿದ್ದಿಕಿ ಎಂಬಾತ ಕರೋನಾ ವೈರಸ್ ನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಮಾರಕ ರೋಗ ಹರಡುವ ಭಯ ಮೂಡಿದ್ದು ವೃದ್ಧನ ಜೊತೆ ಸಂಪರ್ಕದಲ್ಲಿದ್ದ 46 ಜನರ ಮೇಲೆ ನಿಗಾ ಇಡಲಾಗಿದೆ.

ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಶರತ ಬಿ, ಮೃತ ವೃದ್ಧನ ಜೊತೆಗೆ ಸಂಪರ್ಕದಲ್ಲಿದ್ದ 46 ಜನರ ಮೇಲೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ 31 ಜನರನ್ನ ಹೈ ರಿಸ್ಕ್ ಹಾಗೂ 15 ಜನರನ್ನ ಲೋ ರಿಸ್ಕ್ ಎಂದು ಪಟ್ಟಿ ಮಾಡಲಾಗಿದೆ ಅಂತಾ ತಿಳಿಸಿದ್ದಾರೆ. ಇದಕ್ಕಾಗಿ ಇಎಸ್ ಯುಸಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿಯ ಎಲ್ಲ ಗಡಿಗಳಲ್ಲಿ ತಪಾಸಣೆ ನಡೆಸಲಾಗ್ತಿದೆ. ಸುತ್ತಮತ್ತಲ್ಲಿನ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಐಸೋಲೇಟೆಡ್ ಕೇಂದ್ರಗಳನ್ನ ತೆರೆಯಲಾಗಿದೆ. ಒಂದು ವಾರಗಳ ಕಾಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಮದುವೆ, ಸಭೆ, ಸಮಾರಂಭಗಳನ್ನ ಮುಂದೂಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.




error: Content is protected !!