ಗ್ರಾಮ ಪಂಚಾಯ್ತಿ ಸದಸ್ಯನಿಂದ ತರಕಾರಿ ಪೂರೈಕೆ

429

ಅಥಣಿ: ಕರೋನಾ ವೈರಸ್‌ ಹಿನ್ನೆಲೆಯಲ್ಲಿ ದೇಶ್ಯಾದ್ಯಂತ ಲಾಕ್ ಡೌನ್ ಆದೇಶ ಘೋಷಣೆಯಾದ ದಿನದಿಂದ ಇಂದಿನವರಗೂ ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬಗಳು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿವೆ.

ಇದರಿಂದ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮ ಪಂಚಾಯತಿ ‌ಸದಸ್ಯರು ಬಡ ಕುಟುಂಬ ಹಾಗೂ ಕೂಲಿ ಕಾರ್ಮಿಕರಿಗೆ ತರಕಾರಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸುಟ್ಟಟ್ಟಿ ಗ್ರಾಮ ಪಂಚಾಯ್ತಿ ಸದಸ್ಯ ರಮೇಶ ಅಂಬಾಜಿ ಅವರು, ಗ್ರಾಮದಲ್ಲಿ 250 ಕೆಜಿ ತರಕಾರಿ ಹಾಗೂ ನಾಲ್ಕು ನೂರು ಜನರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಜರ್ ವಿತರಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಜಾಗತಿಕ ಮಹಾಮಾರಿ ವೈರಸ್ ಮಾನವನನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಹಲವಾರು ಬಡ ಕುಟುಂಬಗಳಿಗೆ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ನಮಗೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುವುದು ಧರ್ಮ. ಸಾಧ್ಯವಾದಷ್ಟು ಸಹಾಯಮಾಡಿ ಎಂದು ಹೇಳಿದ್ದಾರೆ.




error: Content is protected !!