ಕಲಬುರಗಿಯಲ್ಲಿ ನಾಲ್ವರ ಮೇಲೆ ಬೀದಿ ನಾಯಿಗಳ ದಾಳಿ

428

ಕಲಬುರಗಿ: ಈಗಾಗ್ಲೇ ಕರೋನಾ ಭೀತಿಯಿಂದ ಕಂಗಾಲಾಗಿರುವ ಪಟ್ಟಣದಲ್ಲಿ ಇದೀಗ ಬೀದಿ ನಾಯಿಗಳ ಹಾವಳಿ ಕಂಡು ಬಂದಿದೆ. ಪಟ್ಟಣದ ಚನ್ನವೀರ ಬಡಾವಣೆ, ಬಂಬು ರಸ್ತೆ, ಸುಲ್ತಾನಪುರ ರಸ್ತೆ ಸೇರಿದಂತೆ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಜೋರಾಗಿದೆ.

ಇಂದು ಚನ್ನವೀರ ಬಡಾವಣೆಯಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಇದರ ಪರಿಣಾಮ ಮೈ ತುಂಬಾ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದ್ರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಒಂದ್ಕಡೆ ಕರೋನಾ ಮಹಾಮಾರಿಯಿಂದ ಕಲಬುರ್ಗಿ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಹೀಗಿರುವಾಗ ಬೀದಿ ನಾಯಿಗಳ ಹಾವಳಿ ಮತ್ತಷ್ಟು ಆತಂಕ ಮೂಡಿಸಿದೆ. ಹತ್ತಾರು ನಾಯಿಗಳು ಬಡವಾಣೆ ತುಂಬಾ ಬೊಗಳುತ್ತಾ, ಸಾರ್ವಜನಿಕರ ಮೇಲೆ ದಾಳಿ ಮಾಡ್ತಿವೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹಿರಿಸಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.




error: Content is protected !!