ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ 1.5 ಕೋಟಿ ವಂಚನೆ ದೂರು

243

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇವರಿಬ್ಬರ ವಿರುದ್ಧ 1.5 ಕೋಟಿ ರೂಪಾಯಿ ವಂಚನೆ ದೂರು ದಾಖಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಉದ್ಯಮಿಯೊಬ್ಬರು ಎಫ್ಐಆರ್ ದಾಖಲಿಸಿದ್ದಾರೆ.

2014ರಲ್ಲಿ ಎಸ್ಎಫ್ಎಲ್ ಫಿಟ್ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್, ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಲಾಭ ಗಳಿಸಲು ಕಂಪನಿಯಲ್ಲಿ 1.5 ಕೋಟಿ ರೂಪಾಯಿ ಹೂಡಿಕೆ ಮಾಡಲು ಹೇಳಿದರು. ಈ ಮೂಲಕ ನನಗೆ ಫ್ರಾಂಚೈಸಿ ಕೊಡಲಾಗುತ್ತೆ. ಪುಣೆಯ ಕೋರೆಗಾಂವ್ ಹಾಗೂ ಹಡಪ್ ಸರ್ ನಲ್ಲಿ ಸ್ಪಾ ಹಾಗೂ ಜಿಮ್ ತೆರೆಯಲಾಗುತ್ತೆ ಎಂದು ಹೇಳಿದರು. ಆದರೆ, ಅದು ಆಗಿಲ್ಲ. ಹಣ ವಾಪಸ್ ಕೇಳಿದರೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.

420(ವಂಚನೆ), 120-ಬಿ(ಅಪರಾಧ ಪಿತೂರಿ), 506( ಅಪರಾಧ ಬೆದರಿಕೆ) ಹಾಗೂ 34 (ಸಾಮಾನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




error: Content is protected !!