ಸೂಪರ್ 8 ಹಂತಕ್ಕೆ ಟೀಂ ಇಂಡಿಯಾ

111

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ನಲ್ಲಿ ಟೀಂ ಇಂಡಿಯಾ ಅಮೆರಿಕ ವಿರುದ್ಧ ಗೆದ್ದು ಎಂಟರ ಹಂತಕ್ಕೆ ಎಂಟ್ರಿಯಾಗಿದೆ. ಬುಧವಾರ ಸಂಜೆ ನಡೆದ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಭಾರತ ಗೆಲುವು ಸಾಧಿಸಿದೆ.

ಅಮೆರಿಕ ನೀಡಿದ್ದ 111 ರನ್ ಗಳ ಗುರಿಯನ್ನು 18.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಸೂರ್ಯಕುಮಾರ್ ಯಾದವ್ ಅಜೇಯ 50, ಶುವಂ ದುಬೆ ಅಜೇಯ 31 ರನ್ ಗಳಿಂದಾಗಿ ಈ ಗೆಲುವು ದಾಖಲಾಯಿತು.

ನಾಯಕ ರೋಹಿತ್ ಶರ್ಮಾ 3, ವಿರಾಟ್ ಕೊಹ್ಲಿ 0 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಪಂತ್ 18 ರನ್ ಗಳಿಸಿದರು. ಯುಎಸ್ಎ ಪರ ಸೌರಭ್ ನೆಟರ್ವಲ್ಕರ್ 2, ಅಲಿ ಖಾನ್ 1 ವಿಕೆಟ್ ಪಡೆದರು.

ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅರ್ಷದೀಪ್ ಸಿಂಗ್ ಬೌಲಿಂಗ್ ದಾಳಿಗೆ ಅಮೆರಿಕ ಪಡೆ ಅಲ್ಪ ಮೊತ್ತಕ್ಕೆ ಕುಸಿತು. ಸ್ಟೇವನ್ ಟೈಲರ್ 24, ನಿತೀಶ್ ಕುಮಾರ್ 27 ರನ್ ಬಿಟ್ಟರೆ ಉಳಿದವರಿಂದ ಹೆಚ್ಚು ರನ್ ಬರಲೇ ಇಲ್ಲ. ಹೀಗಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ಭಾರತ ಪರ ಅರ್ಷದೀಪ್ ಸಿಂಗ್ 4 ಓವರ್ ಗಳಲ್ಲಿ ಕೇವಲ 9 ರನ್ ಕೊಟ್ಟು 4 ವಿಕೆಟ್ ಪಡೆದು ಮಿಂಚಿದರು. ಹಾರ್ದಿಕ್ ಪಾಂಡ್ಯ 2, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು. ಅರ್ಷದೀಪ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




error: Content is protected !!