ಕ್ರಿಕೆಟ್ ಶಿಶು ಎದುರು ಮುಗ್ಗರಿಸಿದ ಪಾಕ್

106

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್-2024 ಸರಣಿ ಶುರುವಾಗಿದೆ. ಗುರುವಾರ ಸಂಜೆ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಮೆರಿಕ ಎದುರು ಪಾಕಿಸ್ತಾನ ಸೋಲು ಅನುಭವಿಸಿದೆ. ಈ ಮೂಲಕ ಅಮೆರಿಕ ಐತಿಹಾಸಿಕ ಗೆಲುವು ದಾಖಲಿಸಿದೆ.

ಗ್ರ್ಯಾಂಡ್ ಪ್ರಿಯರಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಮೊದಲು ಬ್ಯಾಟ್ ಮಾಡಿ 7 ವಿಕೆಟ್ ಕಳೆದುಕೊಂಡು ಕೇವಲ 159 ರನ್ ಕಲೆ ಹಾಕಿತು. ನಾಯಕ ಅಜಂ ಖಾನ್ 44, ಶದಾಬ್ ಖಾನ್ 40 ರನ್ ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ನಿಲ್ಲಲಿಲ್ಲ.

ಈ ಸ್ಕೋರ್ ಬೆನ್ನು ಹತ್ತಿದ ಅಮೆರಿಕ ತಂಡ, ನಾಯಕ ಮೊನಾಂಕ್ ಪಟೇಲ್ ಅರ್ಧ ಶತಕ, ಗೌಸ್ 35, ಜೋನ್ಸ್ ಅಜೇಯ 36 ರನ್ ಗಳೊಂದಿಗೆ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಸಮಬಲ ಸಾಧಿಸಿತು. ಪಂದ್ಯ ಟೈ ಆದ ಪರಿಣಾಮ ಸೂಪರ ಓವರ್ ಆಡಿಸಲಾಯಿತು.

ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 1 ವಿಕೆಟ್ ಕಳೆದುಕೊಂಡು 18 ರನ್ ಗಳಿಸಿತು. ಪಾಕ್ ಕೇವಲ 13 ರನ್ ಗಳಿಸಿ ಹೀನಾಯ ಸೋಲು ಅನುಭವಿಸಿತು. ಪಾಕ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಹಾಗೂ ಐಸಿಸಿ ಖಾಯಂ ಸ್ಥಾನ ಹೊಂದಿದ ತಂಡದ ವಿರುದ್ಧ 4ನೇ ಗೆಲುವನ್ನು ಅಮೆರಿಕ ಸಾಧಿಸಿತು.




error: Content is protected !!