ರೋಹಿತ-ರಹಾನೆ ಆಟ.. ಫಸ್ಟ್ ಡೇ 300 ರನ್

467

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಕೊಹ್ಲಿ ಲೆಕ್ಕಾಚಾರ ಉಲ್ಟಾ ಮಾಡಿದ್ದು ಸ್ಟೋನ್. ಆರಂಭದಲ್ಲಿ ಟೀಂ ಇಂಡಿಯಾಗೆ ಆಘಾತ ನೀಡಿದ್ದು ಓಲೆ ಸ್ಟೋನ್ ಶುಭನಂ ಗಿಲ್ ನ್ನ ಎಲ್ ಬಿಡಬ್ಲು ಮಾಡುವ ಮೂಲಕ 0 ರನ್ ಗೆ 1 ವಿಕೆಟ್ ಪಡೆದ್ರು. ಬಳಿಕ ರೋಹಿತ ಶರ್ಮಾ, ಪೂಜಾರ 85 ರನ್ ಜೊತೆಯಾಟವಾಡಿ ಒಂದಿಷ್ಟು ಬುನಾದಿ ಹಾಕಿದ್ರು.

85ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 1 ರನ್ ಗಳಿಸುವಷ್ಟರಲ್ಲಿ ಕ್ಯಾಪ್ಟನ್ ಕೊಹ್ಲಿ (0) ವಿಕೆಟ್ ಕಳೆದುಕೊಂಡಿತು. ಮುಂದೆ ಭಾರತಕ್ಕೆ ಆಸರೆಯಾದ ರೋಹಿತ 161 ರನ್ ಗಳಿಸಿದ. ರೋಹಿತಗೆ ಸಾಥ್ ನೀಡಿದ ರಹಾನೆ 67 ರನ್ ಗಳಿಸಿದ. ಅಶ್ವಿನ್ 13 ರನ್ ಗಳಿಸಿ ಔಟ್ ಆದ. ರಿಷಬ್ ಪಂಥ್ 33 ಹಾಗೂ ಅಕ್ಷರ ಪಟೇಲ 5 ರನ್ ಗಳಿಸಿ ಆಡ್ತಿದ್ದಾರೆ.

ಅಂತಿಮವಾಗಿ ಮೊದಲ ದಿನದಾಟ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ. ಇಂಗ್ಲೆಂಡ್ ಪರ ಲೀಚ್ 2, ಮೋಯಿನ್ ಅಲಿ 2, ರೋಟ್ 1, ಸ್ಟೋನ್ 1 ವಿಕೆಟ್ ಪಡೆದ್ರು.




error: Content is protected !!