ನಟ ಯುವ ದಾಂಪತ್ಯದಲ್ಲಿ ಬಿರುಕು.. ಆರೋಪ, ಪ್ರತ್ಯಾರೋಪ

105

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದ ವರನಟ ಡಾ.ರಾಜಕುಮಾರ್ ಅವರ ಮೊಮ್ಮಗ ಯುವ ರಾಘವೇಂದ್ರರಾಜಕುಮಾರ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹೀಗಾಗಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿರುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಇಬ್ಬರ ಕಡೆಯಿಂದ ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿವೆ.

ನಟ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲೇ ಮದುವೆಯಾಗಿದ್ದಾರೆ. ಶ್ರೀದೇವಿ ಎನ್ನುವ ಯುವತಿಯನ್ನು ಪ್ರೀತಿಸಿ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ರಾಜ್ ಕುಟುಂಬ ನಡೆಸುವ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯೇ ಯುವ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಮೂಡಿದೆ. ಮುಂದೆ ಮದುವೆಯಾಗಿದ್ದಾರೆ.

ಈಗ ನೋಡಿದರೆ ಡಿವೋರ್ಸ್ ಗೆ ಬಂದಿದೆ. ಯುವ ಪರ ವಕೀಲರು, ಶ್ರೀದೇವಿ ಅಕಾಡೆಮಿ ಹಣ ಲಪಾಟಿಸಿ ಮೈಸೂರಿನಲ್ಲಿ ಜಮೀನು ಖರೀದಿಸಿದ್ದಾರಂತೆ. ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಸೈಟ್ ಖರೀದಿಸಿದ್ದಾರಂತೆ. ಸುಳ್ಳಿ ಹೇಳಿ ಅಮೆರಿಕಕ್ಕೆ ಹೋಗಿ ಅಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಅಲ್ಲಿಯೇ ಸೆಟಲ್ ಆಗಬೇಕು ಎಂದುಕೊಂಡಿದ್ದರು ಎನ್ನುವ ಆರೋಪದ ಜೊತೆಗೆ ಅಕ್ರಮ ಸಂಬಂಧದ ಗಂಭೀರ ಆರೋಪವನ್ನು ಯುವ ಪರ ವಕೀಲರು ಆರೋಪಿಸಿದ್ದಾರೆ.

ಇತ್ತ ಶ್ರೀದೇವಿ ತಮ್ಮ ವಿರುದ್ಧದ ಆರೋಪವನ್ನು ಅಲ್ಲಗೆಳೆದಿದ್ದಾರೆ. ವೃತ್ತಿಪರ ಸೌಹಾರ್ದತೆಯನ್ನು ಕಾಪಾಡಬೇಕಾದ ವ್ಯಕ್ತಿಯೇ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಸತ್ಯ, ನ್ಯಾಯ ಖಂಡಿತ ಮೇಲುಗೈ ಸಾಧಿಸುತ್ತದೆ ಎಂದಿದ್ದಾರೆ. ಅಲ್ಲದೆ ನಟ ಯುವನಿಗೆ ಚಿತ್ರರಂಗದ ನಟಿಯೊಬ್ಬಳ ಜೊತೆಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ ದೊಡ್ಮನೆ ಕುಟುಂಬದ ವಿಚಾರ ಬೀದಿಗೆ ಬಂದಿದೆ. ನಟ ಶಿವರಾಜಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜಕುಮಾರ್ ಮಾತನಾಡಿದ್ದು, ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಮಾಧ್ಯಮದಲ್ಲಿ ಬಂದ ಬಳಿಕವಷ್ಟೇ ವಿಚಾರ ತಿಳಿದಿದ್ದು. ನಮಗೆ ಗೊತ್ತಿಲ್ಲದೆ ಏನೂ ಮಾತನಾಡಲು ಸಾಧ್ಯವಿಲ್ಲ ಎಂದಿದ್ದಾರೆ.




error: Content is protected !!