ವಿದ್ಯಾಕಾಶಿಯಲ್ಲಿ ‘ಕರ್ನಾಟಕ ಕುಸ್ತಿ ಹಬ್ಬ’

413

ಧಾರವಾಡ: ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ಫೆಬ್ರವರಿ 22ರಿಂದ 25ರ ವರೆಗೆ ಕರ್ನಾಟಕ ಕುಸ್ತಿ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘ ಜಂಟಿಯಾಗಿ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿವೆ.

ಒಲಂಪಿಕ್ ಪದಕ ವಿಜೇತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಯೋಗೇಶ್ವರ ದತ್, ಪದ್ಮಶ್ರೀ ಪುರಸ್ಕೃತ ಅರ್ಜುನ, ಒಲಂಪಿಕ್ ಪದಕ ವಿಜೇತೆ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಸಾಕ್ಷಿ ಮಲಿಕ್, ಇಂಟರ್ ನ್ಯಾಷನಲ್ ಕುಸ್ತಿಪಟುಗಳಾದ ಭಾರತ ಕೇಸರಿ ಉಮೇಶ ಚೌಧರಿ, ಮಹ್ಮದ ಮುರಾಡಿ, ಅಂಶು ಮಲಿಕ್, ಜೈಲಾ ನಾಗೀಜಡೆ, ನೈನಾ, ಸಭೀರಾ, ಅಲಿಯೆವಾ ಸೇರಿದಂತೆ ಅನೇಕ ಹೆಸರಾಂತ ಪೈಲ್ವಾನ್ ಗಳು ವಿದ್ಯಾಕಾಶಿಗೆ ಎಂಟ್ರಿ ಕೊಡ್ತಿದ್ದಾರೆ.

ಕೆಸಿಡಿ ಮೈದಾನದಲ್ಲಿ 3 ಕಡೆ ಅಖಾಡ ರೆಡಿ ಮಾಡಲಾಗಿದೆ. ಈ ಬಗ್ಗೆ ಈಗಾಗ್ಲೇ ಸ್ಥಳೀಯ ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೊಳನ್ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. 30 ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ದೇಶದ ಮೂಲೆ ಮೂಲೆಯಿಂದ 1,200 ಕ್ಕೂ ಹೆಚ್ಚು ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸ್ತಿದ್ದಾರೆ. ಇದರಲ್ಲಿ ಗೆಲ್ಲುವವರಿಗೆ 80 ಲಕ್ಷ ರೂಪಾಯಿ ಹಾಗೂ ಪಾರಿತೋಷಕ ನೀಡಲಾಗ್ತಿದೆ.




error: Content is protected !!