ನೀರಿನಲ್ಲಿ ಕೊಚ್ಚಿ ಹೋದ ಐವರ ಮೃತದೇಹ ಪತ್ತೆ

75

ಪ್ರಜಾಸ್ತ್ರ ಸುದ್ದಿ

ಪುಣೆ: ಲೋಣಾವಳ ಜಲಪಾತದಲ್ಲಿ ಕೊಚ್ಚಿ ಐವರ ಮೃತದೇಹಗಳು ಪತ್ತೆಯಾಗಿವೆ. ಓರ್ವ ಮಹಿಳೆ, ಒಂದು ಮಗು, ಮೂವರು ಮಕ್ಕಳು ಸೇರಿ ಐವರು ಕೊಚ್ಚಿಕೊಂಡು ಹೋಗಿದ್ದರು. ಅವರ ಮೃತದೇಹಗಳು ಇದೀಗ ಪತ್ತೆಯಾಗಿವೆ.

ಸ್ಥಳೀಯ ಪೊಲೀಸರು, ರಕ್ಷಣಾ ತಂಡ ಕಳೆದ ಎರಡು ದಿನಗಳಿಂದ ಮೃತದೇಹಗಳ ಪತ್ತೆ ಕಾರ್ಯ ನಡೆಸಿದ್ದರು. ಈ ಭೀಕರ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿ ನೋಡುಗರ ಎದೆ ಝಲ್ ಎನಿಸುತ್ತಿವೆ. ಭುಶಿ ಆಣೆಕಟ್ಟಿನ ಜಲಪಾತಕ್ಕೆ ಭಾನುವಾರ 16-17 ಜನರ ತಂಡ ಹೋಗಿತ್ತು. ಆಗ ಈ ದುರಂತ ನಡೆದಿದೆ.

ಈ ಘಟನೆ ಹಿನ್ನಲೆಯಲ್ಲಿ ಭೋರ್, ಮುಲ್ಶಿ, ಅಂಬೇಗಾಂವ್, ಖೇಡ್, ಜುನ್ನಾರ್, ವೆಲ್ಹಾ ಪ್ರದೇಶಗಳಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷಿತದ ಬಗ್ಗೆ ಗಮನ ಇರಲಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಅಪಾರ ಇರುವ ಜಾಗಗಳ ಕುರಿತು ಹೇಳಬೇಕು. ಬೋರ್ಡ್ ಅಳವಡಿಸಬೇಕು. ಸ್ಥಳಗಳಲ್ಲಿ ರಕ್ಷಣಾ ತಂಡ, ಬೋಟ್, ಲೈಫ್ ಜಾಕೇಟ್ ಗಳು ಇರಬೇಕು ಎಂದು ಸೂಚಿಸಿದ್ದಾರೆ.




error: Content is protected !!