ಲೋಕ ಕದನ: ಕೊನೆಯ ಹಂತದ ಮತದಾನ ಶುರು

80

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭಾ ಚುನಾವಣೆಯ 7 ಹಾಗೂ ಕೊನೆಯ ಹಂತದ ಮತದಾನ ಇಂದು ಮುಂಜಾನೆ 7ಗಂಟೆಯಿಂದ ಶುರುವಾಗಿದೆ. ಪಂಜಾಬಿನ 13, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಾಂಡ್ 3 ಹಾಗೂ ಚಂಡೀಗಢದ 1 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಪ್ರಧಾನಿ ಮೋದಿ ಸ್ಪರ್ಧಿಸಿರುವ ವಾರಣಾಸಿಗೆ ಇಂದು ಮತದಾನ ನಡೆಯುತ್ತಿದೆ. ನಟಿ ಕಂಗನಾ ರಣೌತ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಕೊನೆಯ ಹಂತದ ಚುನಾವಣೆ ಕಣದಲ್ಲಿದ್ದಾರೆ.

ಲೋಕಸಭೆಯ 543 ಸ್ಥಾನಗಳಿಗೆ ಏಪ್ರಿಲ್ 19ರಂದು ಮತದಾನ 7 ಹಂತಗಳಲ್ಲಿ ನಡೆಯುತ್ತಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇಂಡಿಯಾ ಮೈತ್ರಿಕೂಟ ಬಿಜೆಪಿ ನೇತೃತ್ವದ ಎನ್ ಡಿಎ ಪಡೆಯನ್ನು ಸೋಲಿಸಿ ಮರಳಿ ಅಧಿಕಾರಕ್ಕೆ ಬರುತ್ತೇವೆ. ಈ ಮೂಲಕ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಸರ್ಕಾರ ಕಿತ್ತೊಗೆಯುತ್ತೇವೆ ಎನ್ನುತ್ತಿದೆ. ಈ ಬಾರಿ 400 ಸ್ಥಾನ ಪಡೆದು ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ಪಡೆ ಹೇಳುತ್ತಿದೆ. ಎಲ್ಲದಕ್ಕೂ ಜೂನ್ 4ರಂದು ಉತ್ತರ ಸಿಗಲಿದೆ.




error: Content is protected !!