85 ವರ್ಷದ ಅಜ್ಜಿಗೆ ಸ್ಕೂಲ್ ತೆರೆದ ಸೋನ್ ಸೂದ್

306

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೋವಿಡ್ 19 ನಿಂದ ಶುರುವಾದ ಲಾಕ್ ಡೌನ್ ದೇಶದ ಜನರ ಜೀವನ ಹಾಳು ಮಾಡಿತು. ಇದೀಗ ಅನ್ ಲಾಕ್ ಪ್ರಕ್ರಿಯೆ ಶುರುವಾಗಿದ್ರೂ ಅವರಿಗೆ ಜೀವನ ಕಟ್ಟಿಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ ಇತ್ತೀಚೆಗೆ ಸುಮಾರು 85 ವರ್ಷದ ಅಜ್ಜಿಯೊಬ್ಬರು, ತಾವು ಕಲೆತ ಮಾರ್ಷಲ್ ಆರ್ಟ್ಸ್ ನ್ನ ರಸ್ತೆಯಲ್ಲಿ ಪ್ರದರ್ಶನ ಮಾಡಿ ಹಣ ಸಂಪಾದನೆ ಮಾಡ್ತಿದ್ರು.

ಅಜ್ಜಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಇದನ್ನ ನೋಡಿದ ಬಾಲಿವುಡ್ ನಟ ಸೂನ್ ಸೂದ್, ಅಜ್ಜಿಗೆ ಸ್ಕೂಲ್ ತೆರೆದು ಕೊಡುವ ಭರವಸೆ ನೀಡಿದ್ರು. ಹೀಗಾಗಿ ಅವರ ವಿಳಾಸ ಪಡೆಯಲು ಮುಂದಾದ್ರು. ದೇಶದ ಹೆಣ್ಮಕ್ಕಳಿಗೆ ಸ್ವಯಂರಕ್ಷಣೆಗೆ ಸಮರ ಕಲೆ ಮುಖ್ಯವಾಗಿದೆ. ಹೀಗಾಗಿ ಅಜ್ಜಿಗೆ ಸ್ಕೂಲ್ ತೆರೆದು ಕೊಡಲಾಗುವುದು, ದಯವಿಟ್ಟು ಅವರ ವಿಳಾಸ ತಿಳಿಸಿ ಎಂದು ಬರೆದುಕೊಂಡಿದ್ರು.

ಕಡೆಗೂ ಸೋನ್ ಸೂದ್, ಪುಣೆಯ ಹಪ್ಸರ್ ನ ನಿವಾಸಿಯಾದ 85 ವರ್ಷದ ಶಾಂತಾ ಬಾಲು ಪವಾರ ಅವರನ್ನ ಪತ್ತೆ ಮಾಡಿದ್ರು. ಇದೀಗ ಅಜ್ಜಿಗೆ ಶಾಲೆ ತೆರೆದುಕೊಟ್ಟಿದ್ದಾರೆ. ಅಜ್ಜಿ ವಿದ್ಯಾರ್ಥಿಗಳ ಸಮರ ಕಲೆ ತರಬೇತಿ ನೀಡ್ತಿದ್ದಾರೆ. ತಮ್ಗೆ ಸಹಾಯ ಮಾಡಿದ ಸೋನ್ ಸೂದ್ ಅವರ ಹೆಸರನ್ನೇ ಶಾಲೆಗೆ ಇಟ್ಟಿದ್ದು, ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ನಟ ಸೋನ್ ಸೂದ್ ಅವರ ಸಹಾಯ ಕೆಲಸ ಮುಂದುವರೆದಿದ್ದು, ನಿಜಕ್ಕೂ ಇವರು ಇತರೆ ನಟರಿಗೆ ಮಾದರಿಯಾಗಿದ್ದಾರೆ.




error: Content is protected !!