ಮತದಾರರ ಋಣ ತಿರೀಸಲು ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸಬೇಕು: ಶಾಸಕ ಮನಗೂಳಿ

107

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಗ್ರಾಮೀಣ ಭಾಗದ ಕಟ್ಟ ಕಡಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ತಲುಪಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ತಾಲೂಕಿನ ಬಂದಾಳ ಗ್ರಾಮ ಪಂಚಾಯತಿಯ ನೂತನ ಎನ್ ಆರ್ ಎಲ್ಎಂ ಕಟ್ಟಡ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯತ್ ಸರ್ವ ಸದಸ್ಯರ ಪಾತ್ರ ಮೇಲು ಕಾಣಬೇಕು. ಜನರ ಆರ್ಥಿಕ ಮಟ್ಟ ಸುಧಾರಿಸಲು ಸರಕಾರ ನರೇಗಾ ಯೋಜನೆಯು ಜಾರಿಗೆ ತರುವ ಮೂಲಕ ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಅವಕಾಶ ಕಲ್ಪಿಸಬೇಕು. ಗ್ರಾಮ ಪಂಚಾಯತಿ ಸದಸ್ಯರು ಮತದಾರರ ಋಣ ತಿರೀಸಲು ಸರಕಾರದ ಯೋಜನೆಗಳು ಮುಟ್ಟಿಸಬೇಕು ಹಾಗೂ ಗ್ರಾಮ ಅಭಿವೃದ್ಧಿ ಹೊಂದಲು ಸರ್ವರು ಕೂಡಿಕೊಂಡು ಕೆಲಸ ನಿರ್ವಹಿಸಬೇಕು ಎಂದರು.

ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ ಮಾತನಾಡಿದರು. ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಸುವರ್ಣ ಶಂಕ್ರೆಪ್ಪ ಮಕಣಾಪೂರ ಅಧ್ಯಕ್ಷತೆ ವಹಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಟ್ಟಪ್ಪ ಉಕ್ಕಲಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಆರ್ ಶಾಹಾಪೂರ, ಸಂತೋಷ ಪಾಸೋಡಿ, ಆರ್.ಎನ್ ಮೂಜಾವರ, ಆರ್.ವೈ ಹಿರೇಕುರಬರ, ಗ್ರಾಮ ಪಂಚಾಯತಿ ಸದಸ್ಯರು  ಉಪಸ್ಥಿತರಿದ್ದರು. ಚಂದ್ರಶೇಖರ ಬೂಯ್ಯಾರ ಸ್ವಾಗತಿಸಿದರು. ಬಸವರಾಜ ಅಗಸರ ನಿರೂಪಿಸಿದರು. ಪಿ.ವಿ ಕುಲಕರ್ಣಿ ವಂದಿಸಿದರು.




error: Content is protected !!