ಆಗಾಗ ಎಚ್ಐವಿ ಟೆಸ್ಟ್ ಮಾಡಿಸುತ್ತಿದ್ದರಾ ಪ್ರಜ್ವಲ್?

62

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯುವತಿಯರ ಮೇಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, 4 ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್ ಮಾಡಿಸುತ್ತಿದ್ದರು ಎನ್ನುವ ವಿಚಾರ ತನಿಖೆಯಿಂದ ಹೊರ ಬಂದಿದೆಯಂತೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಪ್ರಜ್ವಲ್ ರೇವಣ್ಣ ಚಟುವಟಿಕೆಗಳು ಏನು? ಯಾವಾಗ ಎಲ್ಲಿ ಇರುತ್ತಿದ್ದರು? ಎಲ್ಲಿ ಹೋಗುತ್ತಿದ್ದರು? ಸಾಮಾನ್ಯ ಚಟುವಟಿಕೆಗಳು ಏನಾಗಿದ್ದವರು ಅನ್ನೋದರ ಜಾಡು ಬೆನ್ನು ಹತ್ತಿದ್ದಾಗ ನಾಲ್ಕು ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದರು ಅನ್ನೋದು ತಿಳಿದು ಬಂದಿದೆಯಂತೆ.

ಪ್ರಜ್ವಲ್ ರೇವಣ್ಣ ವಿರುದ್ಧ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವಿದೆ. ಸಧ್ಯ ತನಿಖೆ ನಡೆಯುತ್ತಿರುವುದು 5 ಪ್ರಕರಣಗಳಿಗೆ ಸಂಬಂಧಿಸಿದಂತೆ. ಸಧ್ಯ ನ್ಯಾಯಾಂಗ ಬಂಧನದಲ್ಲಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ಜೆಡಿಎಸ್ ಕಾರ್ಯಕರ್ತನಿಗೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಹೊತ್ತಿರುವ ಸಹೋದರ ಸೂರಜ್ ರೇವಣ್ಣ ಪೊಲೀಸ್ ಕಸ್ಟಡಿಯಲ್ಲಿದ್ದು ಇಂದು ಕೋರ್ಟಿಗೆ ಹಾಜರು ಪಡಿಸಲಿದ್ದಾರೆ.

ಇವರ ತಂದೆ, ಮಾಜಿ ಸಚಿವ ಹೆಚ್.ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ ವಿರುದ್ಧ ಸಹ ಸಂತ್ರಸ್ತೆಯರಿಗೆ ಕಿರುಕುಳ, ಅಪಹರಣ ಪ್ರಕರಣದ ಆರೋಪ ಹೊತ್ತಿದ್ದು, ಜಾಮೀನು ಮೇಲೆ ಹೊರಗೆ ಇದ್ದಾರೆ.




error: Content is protected !!