ರಾಹುಲ್ ವಾಗ್ಝರಿಗೆ ಎನ್ ಡಿಎ ಸರ್ಕಾರ ಸೈಲೆಂಟ್..!

54

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕರಾದ ಬಳಿಕ ರಾಹುಲ್ ಗಾಂಧಿ ಸೋಮವಾರ ಸದನದಲ್ಲಿ ಆಡಳಿತರೂಢ ಎನ್ ಡಿಎ ಸರ್ಕಾರ, ಮೋದಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರ ತೀಕ್ಷಣ ಮಾತಿಗೆ ಪ್ರಧಾನಿ ಮೋದಿ ಸಹ ಸೈಲೆಂಟ್ ಆಗಿ ಕುಳಿತಿದ್ದರು.

ಕಳೆದ 10 ವರ್ಷಗಳಲ್ಲಿ ಬಲಿಷ್ಠ ವಿಪಕ್ಷ ಇರಲಿಲ್ಲ ಎನ್ನುವ ಕೊರಗು ಇದೀಗ ನಿವಾರಣೆಯಾದಂತೆ ಕಾಣಿಸುತ್ತಿದೆ ಎಂದು ಇಂಡಿಯಾ ಮೈತ್ರಿಕೂಟದ ಸಂಸದರು ಹೇಳುತ್ತಿದ್ದಾರೆ. ಬಿಜೆಪಿಯ ವಿಚಾರಧಾರೆಗಳು ಹೇಗಿವೆ ಅನ್ನೋದನ್ನು ಕಟು ಮಾತುಗಳ ಮೂಲಕ ಹೇಳಿದರು. ಶಿವ, ಗುರು ನಾನಕ್, ಬುದ್ಧ, ಕ್ರೈಸ್ಥ್, ಮಹಾವೀರರ ಫೋಟೋಗಳನ್ನು ಪ್ರದರ್ಶನ ಮಾಡಿ ಇವರು ಅಹಿಂಸೆ, ಸತ್ಯ, ಧೈರ್ಯದ ಸಂದೇಶ ಸಾರಿದ್ದಾರೆ ಎಂದರು.

24 ಗಂಟೆ ಹಿಂದೂ ಎಂದು ಹೇಳಿಕೊಳ್ಳುವ ಇವರು ಬರೀ ಅಹಿಂಸೆ, ಸುಳ್ಳು, ಅಸತ್ಯರಾಗಿದ್ದಾರೆ. ಮೋದಿ ಅಂದರೆ ಪೂರ್ತಿ ಹಿಂದು ಸಮಾಜವಲ್ಲ, ಬಿಜೆಪಿ ಅಂದ್ರೆ ಪೂರ್ತಿ ಹಿಂದು ಸಮಾಜವಲ್ಲ, ಆರ್ ಎಸ್ಎಸ್ ಅಂದ್ರೆ ಪೂರ್ತಿ ಹಿಂದು ಸಮಾಜವಲ್ಲ ಎಂದರು. ಲೋಕಸಭಾ ಚುನಾವಣಾ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದ ನಾನು ದೇವರಿಂದ ನೇರವಾಗಿ ಬಂದಿದ್ದೇನೆ. ಯಾವುದೇ ಭೌತಿಕವಾಗಿ ಅಲ್ಲ ಎನ್ನುವ ಮಾತನ್ನು ಪ್ರಸ್ತಾಪಿಸಿ ಮೋದಿ ಅವರಿಗೂ ದೇವರಿಗೂ ನೇರ ಸಂಪರ್ಕವಿದೆ. ಇವರ ಆತ್ಮದೊಂದಿಗೆ ದೇವರು ಮಾತನಾಡುತ್ತಾನೆ. ಈ ಬಗ್ಗೆ ಅವರನ್ನೆ ಕೇಳಿ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಹಿಂದೂ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ, ಇದೊಂದು ಗಂಭೀರ ಪ್ರಕರಣವೆಂದರು. ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ ಹಿಂದೂಗಳ ಕ್ಷಮೆ ಕೇಳಬೇಕು ಅಂದರು. ನೀಟ್ ವಿಚಾರ ಸಹ ಪ್ರಸ್ತಾಪಿಸಿ ಎನ್ ಡಿಎ ಸರ್ಕಾರದ ಕಿವಿ ಹಿಂಡಿದರು. ಈ ಮೂಲಕ ಕಲಾಪದಲ್ಲಿ ಮೊದಲೇ ದಿನ ರಾಹುಲ್ ಗಾಂಧಿ ಆಕ್ರಮಣಕಾರಿ ನಾಯಕತ್ವ ತೋರಿಸಿದರು.




error: Content is protected !!