ಬೆಂಗಳೂರಲ್ಲಿ ರೇವ್ ಪಾರ್ಟಿ: 25 ಹುಡುಗಿಯರು, ಡ್ರಗ್ಸ್ ಪತ್ತೆ

77

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿವರೆಗೂ ರೇವ್ ಪಾರ್ಟಿ ನಡೆಸಲಾಗಿದೆ. ಈ ವೇಳೆ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಕೊಕೇನ್, ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. 25 ಹುಡುಗಿಯರು ಸೇರಿ 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಜಿ.ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ಆಂಧ್ರ, ಬೆಂಗಳೂರು ಮೂಲದವರು ಭಾಗಿ. ಹೈದ್ರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜಿಸಿದ್ದ. ಬೆಂಜ್ ಕಾರೊಂದರಲ್ಲಿ ಶಾಸಕ ಕಾಕನಿ ಗೋವರ್ಧನ್ ರೆಡ್ಡಿ ಹೆಸರಿನ ಪಾಸ್ ಪತ್ತೆಯಾಗಿದೆ. 15ಕ್ಕೂ ಹೆಚ್ಚು ಕಾರುಗಳು ಪತ್ತೆಯಾಗಿವೆ.




error: Content is protected !!