ರೇಣುಕಾಸ್ವಾಮಿ ಪತ್ನಿಗೆ ನೌಕರಿ ಭರವಸೆ ಭುಗಿಲೆದ್ದ ಆಕ್ರೋಶ!

75

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ನಟ ದರ್ಶನ್ ಹಾಗೂ ತಂಡದಿಂದ ಕೊಲೆಯಾದ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನು ಗೃಹ ಸಚಿವ ಜಿ.ಪರಮೇಶ್ವರ್ ನೀಡಿದ್ದಾರೆ ಎನ್ನುವುದು ಸುದ್ದಿಯಾಗಿದೆ. ಈ ವಿಚಾರ ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಯಾಕಂದರೆ, ರೇಣುಕಾಸ್ವಾಮಿಯ ಹಿನ್ನಲೆ ಮತ್ತು ಘಟನೆಯ ಹಿಂದಿನ ಉದ್ದೇಶ ಏನಾಗಿದೆ ಅನ್ನೋದು ಜನರು ಪ್ರಶ್ನಿಸುತ್ತಿದ್ದಾರೆ.

ವೈಯಕ್ತಿಕ ಕಾರಣಗಳಿಗೆ ಕೊಲೆಯಾದವರ ಕುಟುಂಬಸ್ಥರಿಗೆ ನೌಕರಿ ಕೊಡುತ್ತಾ ಹೋಗುವುದು ಎಷ್ಟು ಸರಿ ಎನ್ನುತ್ತಿದ್ದಾರೆ. ಈ ಹಿಂದೆ ಹಲವಾರು ಹತ್ಯೆಗಳು ನಡೆದಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಹಲವು ಅಮಾಯಕರ ಕೊಲೆಗಳು ನಡೆದಿವೆ. ಅವರ ಕುಟುಂಬಗಳಿಗೆ ಇದೂವರೆಗೂ ನ್ಯಾಯ ಸಿಕ್ಕಿಲ್ಲ. ಅಂತಹ ಕುಟುಂಬಗಳಿಗೆ ನೌಕರಿ ಇರಲಿ ಹಣಕಾಸಿನ ನೆರವು ಸಹ ಮಾಡಿಲ್ಲ. ಹೀಗೆ ವೈಯಕ್ತಿಕ ಕಾರಣಗಳಿಗೆ ಕೊಲೆಯಾದವರ ಕುಟುಂಬಸ್ಥರಿಗೆ ನೌಕರಿ ಕೊಡುತ್ತಾ ಹೋದರೆ, ನಟ ದರ್ಶನ್ ಸ್ಟಾರ್ ಎನ್ನುವ ಕಾರಣಕ್ಕೆ ಆತನ ತಂಡ ಈ ಕೃತ್ಯ ನಡೆಸಿದೆ ಎನ್ನುವ ಕಾರಣಕ್ಕೆ ಸರ್ಕಾರಿ ನೌಕರಿ ಕೊಡುತ್ತಾ ಹೋದರೆ ಪ್ರಜಾಪ್ರಭುತ್ವದ ವಿರೋಧಿ ನಡೆಯಾಗುತ್ತೆ ಎಂದು ವಾಗ್ದಾಳಿ ನಡೆಸಲಾಗುತ್ತಿದೆ.

ಹತ್ಯೆಯಾದ ರೇಣುಕಾಸ್ವಾಮಿ ಅನಾವಶ್ಯಕವಾಗಿ ಮತ್ತೊಬ್ಬರ ವೈಯಕ್ತ ಜೀವನದಲ್ಲಿ ಪ್ರವೇಶ ಮಾಡಿದ್ದಾನೆ. ಪರಸ್ತ್ರೀಗೆ ಅಶ್ಲೀಲ ಮೆಸೇಜ್, ಫೋಟೋ ಕಳಿಸಿದ್ದಾನೆ. ಆತನನ್ನು ಕೊಲೆ ಮಾಡಿದವರದ್ದು ಎಷ್ಟು ತಪ್ಪು ಇದೆಯೋ ಅಷ್ಟೇ ತಪ್ಪು ಆತನದು ಇದೆ ಎನ್ನುವುದು ಅನೇಕರ ವಾದ. ಹೀಗಿರುವಾಗ ಸರ್ಕಾರ ತರಾತುರಿತಯಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಕೆಟ್ಟ ಹಾಗೂ ತಪ್ಪು ಸಂದೇಶ ಹೋಗುತ್ತೆ. ಕಾನೂನಾತ್ಮಕವಾಗಿ ಆ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಲಿ. ವೈಯಕ್ತಿಕವಾಗಿ ಸಹಾಯ ಮಾಡುವವರು ಮಾಡಲಿ. ಅದು ಅವರ ಆಯ್ಕೆ. ಆದರೆ, ಸರ್ಕಾರದಿಂದ ತಪ್ಪು ಆಗದಿರಲಿ ಎನ್ನುವ ಕೂಗು ಎದ್ದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.




error: Content is protected !!