ಟೈರ್ ಸ್ಫೋಟ, ಕ್ರೂಸರ್ ಅಪಘಾತ: ಮೂವರು ಮಹಿಳೆಯರ ಸಾವು

135

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಮಹಾರಾಷ್ಟ್ರದ ಜತ್-ಪಂಡರಾಪುರ ರಸ್ತೆಯಲ್ಲಿ ಕ್ರೂಸರ್ ಅಪಘಾತವಾಗಿದ್ದು, ಬೆಳಗಾವಿಯ ಅಥಣಿ ಮೂಲದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಶನಿವಾರ ಮುಂಜಾನೆ ಮಹಾರಾಷ್ಟ್ರದ ಸಾಂಗೋಲಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು, ಕ್ರೂಸರ್ ಟೈರ್ ಸ್ಫೋಟವಾಗಿ ಅಪಘಾತ ನಡೆದಿದೆ.

ಇದರಿಂದಾಗಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. 6ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಕಸ್ತೂರಿ, ಗೀತಾ ದೊಡಮನಿ ಹಾಗೂ ಮಹಾದೇವಿ ಚೌಗಲಾ ಮೃತ ದುರ್ದೈವಿಗಳು. ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.




error: Content is protected !!