ಅತ್ಯಂತ ಭಯಾನಕವಿದೆ ಬಿಹಾರ್ ಪೊಲೀಸರ ಈ ಕೃತ್ಯ

272

ಪ್ರಜಾಸ್ತ್ರ ಸುದ್ದಿ

ಮುಜಾಫರಪುರ್: ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತದೇಹದ ಭಾಗಗಳನ್ನು ಪೊಲೀಸರೆ ನಾಲೆಗೆ ಎಸೆದಿರುವ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಹಾರದ ಮುಜಾಫರಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತದೇಹದ ಭಾಗಗಳನ್ನು ಪೊಲೀಸರು ಎತ್ತಿ ಬಿಸಾಕಿರುವ ದೃಶ್ಯ ನೋಡಿದ ಪ್ರತಿಯೊಬ್ಬರು ಯಾವುದೇ ಮನುಷ್ಯನಿಗೆ ಈ ರೀತಿಯ ಸಾವು ಬರಬಾರದು ಎನ್ನುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪೊಲೀಸರು, ಮೃತದೇಹ ಗುರುತು ಪತ್ತೆಯಾಗಿಲ್ಲ. ರಕ್ಷಿಸಿಡಬಹುದಾದ ಭಾಗಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ರಕ್ಷಿಸಿಡಲು ಅಸಾಧ್ಯವಾದ ದೇಹದ ಭಾಗಗಳನ್ನು ನಾಲೆಗೆ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಮೃತದೇಹವನ್ನು ಸೂಕ್ತವಾಗಿ ವಿಲೇವಾರಿ ಮಾಡದೆ ಅಮಾನವೀಯವಾಗಿ ನಡೆದುಕೊಂಡ ಪೊಲೀಸರ ವಿರುದ್ಧ ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.




error: Content is protected !!