ಸುಂದರ ಪಟ್ಟಣ ಮಾಡುವುದು ನನ್ನ ಗುರಿ: ಶಾಸಕ ಅಶೋಕ ಮನಗೂಳಿ

120

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಿಂದಗಿ ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಪ್ರಮುಖ ರಸ್ತೆಗಳನ್ನು ಅಭಿವೃದ್ದಿಪಡಿಸಿ ಪಟ್ಟಣವನ್ನು ಅತ್ಯಂತ ಸುಂದರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಮಂಗಳವಾರ ಲೋಕಪಯೋಗಿ ಇಲಾಖೆ, ಉಪ ವಿಭಾಗ ಸಿಂದಗಿಯ 2023-24ನೇ ಸಾಲಿನ 3054-ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ಯೋಜನೆ ಅಡಿಯಲ್ಲಿ ಜೇವರ್ಗಿ-ಚಿಕ್ಕೋಡಿ ರಸ್ತೆ ಹಾಗೂ ಆಲಮೇಲ -ಸಿಂದಗಿ ರಸ್ತೆ(ಮಹಾತ್ಮಾ ಗಾಂಧಿ ವೃತ್ತದಿಂದ) ರಾಷ್ಟ್ರೀಯ ಹೆದ್ದಾರಿ-50, ಚಿಕ್ಕಸಿಂದಗಿ ವರ್ತುಲ ರಸ್ತೆಯವರೆಗೆ ಬಾಕಿ ಉಳಿದಿರುವ ರಸ್ತೆ ವಿಭಜಕ ಕಾಮಗಾರಿಯ ಅಂದಾಜು 1.25 ಕೋಟಿ ಅನುದಾನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಗರ ಅಭಿವೃದ್ದಿಯಾಗಲು ಮೊದಲು ರಸ್ತೆಗಳು ಉತ್ತಮವಾಗಿರಬೇಕು. ಮುಂಬರುವ ದಿನಗಳಲ್ಲಿ ಸಿಂದಗಿಗೆ ಕೂಡುವ ಎಲ್ಲ ರಸ್ತೆಗಳನ್ನು ಹಾಗೂ ಪಟ್ಟಣದ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಪ್ರಸ್ತುತ ನಿರ್ಮಾಣಗೊಳ್ಳಲಿರುವ ರಸ್ತೆಗೆ ಮೀಡಿಯನ್ ನಿರ್ಮಾಣವಾದ ಬಳಿಕ ಅಲ್ಲಿ ಸುಂದರವಾದ ಗಿಡಗಳನ್ನು ನೆಡುವ ಕಾರ್ಯ ಆರಂಭಗೊಳ್ಳಲಿದೆ ಎಂದರು.

ಈ ವೇಳೆ ಲೋಕಪಯೋಗಿ ಇಲಾಖೆಯ ಅಧಿಕಾರಿ ಅರುಣಕುಮಾರ ವಡಗೇರಿ, ಕಾಂಗ್ರೆಸ್ ಮುಖಂಡ ಗೋಲ್ಲಾಳಪ್ಪಗೌಡ ಮಾಗಣಗೇರಿ, ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಚನ್ನಪ್ಪ ಗೊಣಿ, ಸದಾನಂದ ಕುಂಬಾರ, ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ಅಬ್ದುಲರಹೀಮ ದುದನಿ, ಮಾಜಿ ಸದಸ್ಯ ಮಂಜುನಾಥ ಬಿಜಾಪೂರ, ಶಾಂತಪ್ಪ ರಾಣಾಗೋಳ, ಲಕ್ಷ್ಮೀಕಾಂತ ಸೂಡಿ, ಜಾಂಗೀರ ಸಿಂದಗಿಕರ, ನೂರಅಹ್ಮದ ಅತ್ತಾರ, ಪ್ರವೀಣ ಹಾಲಳ್ಳಿ, ಪರಮಾನಂದ ಬಗಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




error: Content is protected !!