ನಿನ್ನ ನೋಡಿ ಸುಮ್ನ್ ಹೆಂಗರ್ಲಿ ಅಂತಿದ್ದಾಳೆ ರಾಬರ್ಟ್ ಬ್ಯೂಟಿ

383

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ನಟ ದರ್ಶನ ಅಭಿನಯದ ರಾಬರ್ಟ್ ಸಿನಿಮಾದ ಹಾವಳಿ ಈಗಾಗ್ಲೇ ಜೋರಾಗಿದೆ. ಮಾರ್ಚ್ 11ಕ್ಕೆ ಸಿನಿಮಾ ರಿಲೀಸ್ ಆಗ್ತಿದ್ದು, ಟ್ರೇಲರ್, ಸಾಂಗ್ ಎಂದು ಒಂದೊಂದು ರಿಲೀಸ್ ಮಾಡಲಾಗ್ತಿದೆ.

ಈಗಾಗ್ಲೇ ಟೀಸರ್, ಟ್ರೇಲರ್, ಹೀರೋ ಇಂಟ್ರಡೆಕ್ಷನ್ ಸಾಂಗ್ ಧೂಳೆಬ್ಬಿಸಿದ್ದು, ಶನಿವಾರ ಮೆಲೋಡಿ ಸಾಂಗ್ ರಿಲೀಸ್ ಮಾಡಲಾಗಿದೆ. ಕಣ್ಣು ಹೊಡಿಯಾಕ.. ನಿನ್ನ ನೋಡಿ ಸುಮ್ನ್ ಹೆಂಗರ್ಲಿ ಅನ್ನೋ ಸಾಂಗ್ ರಿಲೀಸ್ ಮಾಡಲಾಗಿದೆ. ಶ್ರೇಯಾ ಗೋಷಾಲ್ ಧ್ವನಿಯಲ್ಲಿ ಮೂಡಿ ಬಂದಿರುವ ಸಾಂಗ್ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಅರ್ಜುನ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನು ಫೆಬ್ರವರಿ 28ರಂದು ಹುಬ್ಬಳ್ಳಿಯಲ್ಲಿ ಆಡಿಯೋ ಲಾಂಚ್ ರಿಲೀಸ್ ಮಾಡಲು ರಾಬರ್ಟ್ ಟೀಂ ರೆಡಿಯಾಗಿದ್ದು, ಈ ಬಗ್ಗೆ ನಿರ್ದೇಶಕ ತರುಣ ಸುಧೀರ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.




error: Content is protected !!