ಕನ್ನೊಳ್ಳಿ, ಚಿಕ್ಕಸಿಂದಗಿಯಲ್ಲಿ ಅವಿರೋಧ ಆಯ್ಕೆ

656

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮ ಪಂಚಾಯ್ತಿಯ 5 ವಾರ್ಡ್ ಗಳ 14 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಂತಿಮ ಕಣದಲ್ಲಿ 35 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಈ 14 ಸ್ಥಾನಗಳಲ್ಲಿ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ.

2ನೇ ವಾರ್ಡ್ ಅಭ್ಯರ್ಥಿ ಪ್ರಭುಲಿಂಗ ಸ್ಥಾವರಮಠ ಎಂಬುವರು ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಇದೀಗ ಉಳಿದಿರುವ 13 ಸ್ಥಾನಗಳಿಗೆ ಮತದಾನ ನಡೆಯಬೇಕಿದೆ.

ಪ್ರಭುಲಿಂಗ ಸ್ಥಾವರಮಠ(ಎಡದಿಂದ ಎರಡನೇಯವರು)

ಇನ್ನು ಬಂದಾಳ ಗ್ರಾಮ ಪಂಚಾಯ್ತಿಗೆ ಬರುವ ಚಿಕ್ಕಸಿಂದಗಿಯ 3 ವಾರ್ಡ್ ಗಳ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಲ್ಲಿಯೂ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. 1ನೇ ವಾರ್ಡ್ ಅಭ್ಯರ್ಥಿ ಸರೂಬಾಯಿ ಶಂಕ್ರೆಪ್ಪ ನಾಗಾವಿ ಅವಿರೋಧ ಆಯ್ಕೆಯಾಗಿದ್ದಾರೆ. 7 ಸ್ಥಾನಗಳಿಗೆ ಮತದಾನ ನಡೆಯಬೇಕಿದೆ.




error: Content is protected !!