2022ರ ಸೋಲಿಗೆ ತಿರುಗೇಟು.. ಫೈನಲ್ ಗೆ ಭಾರತ

68

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಪಡೆಯನ್ನು ಹೆಡೆಮುರಿ ಕಟ್ಟಿ ಮನೆಗೆ ಕಳಿಸಿದೆ. ಇದರೊಂದಿಗೆ ಫನಲ್ ಗೆ ಲಗ್ಗೆ ಇಟ್ಟಿದ್ದು, ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿದಂತೆ ಮಳೆಯಿಂದ ಪಂದ್ಯ ತಡವಾಯಿತು. ನಂತರ ಶುರು ಪಂದ್ಯ 8 ಓವರ್ ಗಳು ಆಡುವಷ್ಟರಲ್ಲಿ ಮತ್ತೆ ಮಳೆ ಕಾಣಿಸಿಕೊಂಡಿತು. ಆಗ ಟೀಂ ಇಂಡಿಯಾ 65 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು. ನಂತರ 11 ಗಂಟೆಯ ಬಳಿಕ ಪಂದ್ಯ ಶುರುವಾಯಿತು.

ನಾಯಕ ರೋಹಿತ್ ಶರ್ಮಾ ಅಬ್ಬರದ 57, ಸೂರ್ಯಕುಮಾರ್ ಯಾದವ್ 47, ಹಾರ್ದಿಕ್ ಪಾಂಡ್ಯ 23, ಜಡೇಜಾ 17, ಅಕ್ಷರ್ ಪಟೇಲ್ 10 ರನ್ ಗಳಿಂದಾಗಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ 3 ವಿಕೆಟ್ ಪಡೆದು ಮಿಂಚಿದರು. ಟೊಪ್ಲೆ, ಆರ್ಚರ್, ಕರನ್ ರಶೀದ್ ತಲಾ 1 ವಿಕೆಟ್ ಪಡೆದುರ.

ಸವಾಲಿನ ಗುರಿ ಬೆನ್ನು ಹತ್ತಿದ ಆಂಗ್ಲರ ಪಡೆಯನ್ನು ಟೀಂ ಇಂಡಿಯಾ ಬೌಲರ್ ಗಳು ಕಟ್ಟಿ ಹಾಕಿದರು. ಬ್ರೋಕ್ 25, ಬಟ್ಲರ್ 23, ಜೋಫ್ರಾ ಆರ್ಚರ್ 21 ರನ್ ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು. ಹೀಗಾಗಿ 16.4 ಓವರ್ ಗಳಿಗೆ 103 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ 68 ರನ್ ಗಳ ಅಂತರದಿಂದ ಜಯ ಸಾಧಿಸಿ 2ನೇ ಬಾರಿಗೆ ಫೈನಲ್ ಗೆ ಪ್ರವೇಶಿಸಿದೆ. ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಬೂಮ್ರಾ 2 ವಿಕೆಟ್ ಪಡೆದು ಸಾಥ್ ನೀಡಿದರು. 2007ರಲ್ಲಿ ಶುರುವಾದ ಟಿ-20 ವಿಶ್ವಕಪ್ ನ್ನು ಧೋನಿ ನಾಯಕತ್ವದಲ್ಲಿ ವಿಜಯ ಸಾಧಿಸಿದೆ.

2022ರ ಸೋಲಿಗೆ ತಿರುಗೇಟು

2022ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಭಾರತ ಸೋಲು ಅನುಭವಿಸಿತು. ಹೀಗಾಗಿ ಟೂರ್ನಿಯಿಂದ ಹೊರ ಬಿದ್ದಿತು. ಈಗ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ಗೆ ಸೋಲಿಸಿ ಹೊರಗೆ ಕಳಿಸಿದೆ. ಶನಿವಾರದ ಫೈನಲ್ ಪಂದ್ಯದಲ್ಲಿ ಗೆದ್ದು 2ನೇ ಬಾರಿಗೆ ಚಾಂಪಿಯನ್ಸ್ ಆಗುವ ಅವಕಾಶ ಸಿಕ್ಕಿದೆ.

ರೋಹಿತ್ ಶರ್ಮಾ 5 ಸಾವಿರ ರನ್.. ಕುಲ್ದೀಪ್ 200 ವಿಕೆಟ್ ಸಾಧನೆ

ರನ್ ಮಷಿನ್ ಕೊಹ್ಲಿ ಮತ್ತೆ ವಿಫಲರಾದರು. ನಾಯಕ ರೋಹಿತ್ ಶರ್ಮಾ ಅರ್ಧ ಶತಕ ಪೂರೈಸುವುದರ ಜೊತೆಗೆ ನಾಯಕನಾಗಿ ಐಸಿಸಿ ವರ್ಲ್ಡ್ ಕಪ್ ಗಳಲ್ಲಿ 5 ಸಾವಿರ ರನ್ ಪೂರೈಯಿಸಿದ ಆಟಗಾರನಾದರು. ಇನ್ನೊಂದು ಕಡೆ ಬೌಲರ್ ಕುಲ್ದೀಪ್ ಯಾದವ್ 200 ವಿಕೆಟ್ ಗಳ ಸಾಧನೆ ಮಾಡಿದರು.

ಫೋಟೋ ಕೃಪೆ: ಬಿಸಿಸಿಐ ಟ್ವಿಟ್ಟರ್




error: Content is protected !!