ಟಿ-20 ವಿಶ್ವಕಪ್ ಕಿರೀಟ: ಗೆಲುವು-ಸೋಲಿನ ಕಣ್ಣೀರು

115

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದ ಟೀಂ ಇಂಡಿಯಾ ಇದೀಗ ಚುಟುಕು ಕ್ರಿಕೆಟ್ ಜಗತ್ತಿನ ಚಾಂಪಿಯನ್ಸ್ ಆಗಿದೆ. ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ 2ನೇ ಬಾರಿಗೆ ಟಿ-20 ಚಾಂಪಿಯನ್ಸ್ ಆಗಿದ್ದಾರೆ. ಎಂದಿನಂತೆ ಆಫ್ರಿಕಾ ಪಡೆಗೆ ಚೋಕರ್ಸ್ ಹಣೆಪಟ್ಟಿ ಮುಂದುವರೆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನಾಯಕ ರೋಹಿತ್ ಶರ್ಮಾ ಬಿಗ್ ಟಾರ್ಗೆಟ್ ನೀಡುವ ಪ್ಲಾನ್ ಮಾಡಿದ್ದರು. ಆದರೆ ಸೌಥ್ ಆಫ್ರಿಕಾ ಬೌಲರ್ ಕೇಶವ್ ಮಹಾರಾಜ್ 2ನೇ ಓವರ್ ನಲ್ಲಿ ರೋಹಿತ್ ಶರ್ಮಾ(09), ರಿಷಬ್ ಪಂಥ್(0) ರನ್ ಗೆ ಔಟ್ ಮಾಡಿದರು. ಆಗ ಇಂಡಿಯಾ 23 ರನ್ ಗಳಿಸಿತ್ತು. ನಂತರ ರಬ್ಡಾ ಸಹ ಸೂರ್ಯಕುಮಾರ್ ಯಾದವ್ ವಿಕೆಟ್ ಉರುಳಿಸುವ ಮೂಲಕ 4.3 ಓವರ್ ಗಳಲ್ಲಿ 34 ರನ್ ಗಳಿಗೆ ಪ್ರಮುಖ 3 ಮೂವರು ವಿಕೆಟ್ ಬಿದ್ದವು.

ಇನ್ನೊಂದು ಕಡೆ ಗಟ್ಟಿಯಾಗಿ ನಿಂತಿದ್ದ ವಿರಾಟ್ ಕೊಹ್ಲಿ ವಿಕೆಟ್ ಕಾಯ್ದುಕೊಂಡು ಆಟವಾಡುತ್ತಿದ್ದರು. ಕೊಹ್ಲಿ ಜೊತೆ ಸೇರಿದ ಅಕ್ಷರ್ ಪಟೇಲ್ ಭಾರತೀಯ ಅಭಿಮಾನಿಗಳಿಗೆ ಖುಷಿ ನೀಡಿದರು. ಈ ಜೋಡಿ 68 ರನ್ ಗಳ ಜೊತೆಯಾಟವಾಡಿತು. ಮುಂದೆ ಕೊಹ್ಲಿ ಹಾಗೂ ಶಿವಂ ದುಬೆ ಜೋಡಿ 53 ರನ್ ಗಳ ಜೊತೆಯಾಟವಾಡಿತು. ಇದರಿಂದಾಗಿ ಟೀಂ ಇಂಡಿಯಾ ಸವಾಲಿನ ರನ್ ಪೇರಿಸಿತು. 18.5 ಓವರ್ ನಲ್ಲಿ ಕೊಹ್ಲಿ 76 ರನ್ ಗಳಿಗೆ ಔಟ್ ಆದರು. ಅದಾಗ್ಲೇ ಕೊಹ್ಲಿ ತಂಡಕ್ಕೆ ಏನು ಮಾಡಬೇಕೋ ಅದನ್ನು ಮಾಡಿದ್ದರು. ನಂತರ ಪಾಂಡೆ ಅಜೇಯ 5, ಜಡೇಜಾ 2 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಆಫ್ರಿಕಾ ಪರ ಕೇಶವ್ ಮಹಾರಾಜ್ 2, ನೊರಟಜ್ 2, ಜಾನ್ಸನ್ ಹಾಗೂ ರಬ್ಡಾ ತಲಾ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನು ಹತ್ತಿದ ಆಡನ್ ಮಾರ್ಕಮ್ ಪಡೆಗೆ ಟೀಂ ಇಂಡಿಯಾ ಬೌಲರ್ ಗಳು ಸಹ ಆರಂಭದಲ್ಲಿ ಆಘಾತ ನೀಡಿದರು. 2ನೇ ಓವರ್ ನಲ್ಲಿ ಬೂಮ್ರಾ ಹೆಂಡ್ರಿಕ್ಸ್(04) ವಿಕೆಟ್ ಪಡೆದ. 3ನೇ ಓವರ್ ನಲ್ಲಿ ಅರ್ಷದೀಪ್ ಸಿಂಗ್ ನಾಯಕ ಮಾರ್ಕಮ್(04) ವಿಕೆಟ್ ಪಡೆದ. ಅಲ್ಲಿಗೆ 12ಕ್ಕೆ 2 ವಿಕೆಟ್ ಆಯಿತು. ಡಿಕಾಕ್ ಹಾಗೂ ಸ್ಟುಬಾ ಗಟ್ಟಿಯಾಗಿ ನಿಂತು ತಂಡವನ್ನು ಗೆಲುವಿನ ದಡದತ್ತ ಒಯ್ಯುತ್ತಿದ್ದರು. 9ನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಸ್ಟುಬಾ(31) ವಿಕೆಟ್ ಪಡೆದ. ನಂತರ ಬಂದ ಹೆನ್ರೀಚ್ ಕಾಲ್ಸನ್ ಅಬ್ಬರಿಸಿದ. 5 ಸಿಕ್ಸ್, 2 ಫೋರ್ ಗಳೊಂದಿಗೆ ಭಾರತದ ಕೈಯಿಂದ ಕಪ್ ಕಸೆದುಕೊಳ್ಳುವ ಎಲ್ಲ ಕೆಲಸ ಮಾಡಿದರು. 17ನೇ ಓವರ್ ನ ಮೊದಲ ಬೌಲ್ ನಲ್ಲಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಆಗ 151ಕ್ಕೆ 5 ವಿಕೆಟ್ ಕಳೆದುಕೊಂಡ ಆಫ್ರಿಕಾಗೆ ಗೆಲುವು ಕಷ್ಟವಿರಲಿಲ್ಲ.

ಪಾಂಡ್ಯ ಎಸೆದ 19ನೇ ಓವರ್ ನ ಮೊದಲ ಬೌಲ್ ನಲ್ಲಿ ಮಿಲ್ಲರ್(21) ಸಿಕ್ಸ್ ಎತ್ತಿದ್ದ ಅದನ್ನು ಸೂರ್ಯಕುಮಾರ್ ಯಾದವ್ ಕ್ಯಾಚ್ ಆಗಿ ಪರಿವರ್ತಿಸಿದ್ದು ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ ಆಫ್ರಿಕಾ ಸೋತು ಮತ್ತೊಮ್ಮೆ ಕಣ್ಣೀರು ಹಾಕಿತು. 2ನೇ ಬಾರಿಗೆ ಟಿ-20 ಚಾಂಪಿಯನ್ಸ್ ಆದ ಟೀಂ ಇಂಡಿಯಾ ಗೆದ್ದು ಕಣ್ಣೀರು ಹಾಕಿತು.

ಕ್ರಿಕೆಟ್ ಇತಿಹಾಸದಲ್ಲಿಯೇ ಇದುವರೆಗೂ ಒಂದೇ ಒಂದು ಬಾರಿ ಏಕದಿನ, ಟಿ-20 ಕಪ್ ಎತ್ತಿ ಹಿಡಿಯದ ತಂಡವೆಂದರೆ ಅದು ಸೌಥ್ ಆಫ್ರಿಕಾ. ಈ ತಂಡ ಜಗತ್ತಿನ ಸರ್ವಶ್ರೇಷ್ಠ ಆಟಗಾರರನ್ನು ಕಂಡಿದೆ. ಆದರೆ, ಅದ್ಯಾರ ಕೈಯಿಂದಲೂ ಒಂದು ಬಾರಿಯೂ ಕಪ್ ಗೆಲ್ಲಿಸುವ ಕೊಡುವುದಕ್ಕೆ ಆಗಿಲ್ಲ. ಕೊನೆಯ ಹಂತಕ್ಕೆ ಬಂದು ಯಡವಿ ಬೀಳುವ ಆಫ್ರಿಕಾ ತಂಡವನ್ನು ಚೋಕರ್ಸ್ ಎಂದು ಕರೆಯಲಾಗುತ್ತೆ. ಈ ಹಣೆಪಟ್ಟೆಯನ್ನು ಕಳಚಿಕೊಳ್ಳುವ ಸಾಧ್ಯತೆ ದಾರಾಳವಾಗಿದ್ದರೂ ಎಚ್ಚರಿಕೆಯ ಆಟದಲ್ಲಿ ಯಡವಿ ಮತ್ತೆ ಸೋಲಿನ ಆಘಾತ ಎದುರಿಸಬೇಕಾಯಿತು. ಅವರ ಅಳು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೂ ಸಂಕಟವೆನಿಸಿತು. ಫೈನಲ್ ನಲ್ಲಿ ಭಾರತ ಬದಲು ಮತ್ಯಾವುದೇ ತಂಡವಿದ್ದರೂ ಭಾರತೀಯರ ಬೆಂಬಲ ಸೌಥ್ ಆಫ್ರಿಕಾ ಪರ ಇರುತ್ತಿತ್ತು.

ಸರಣಿಯಲ್ಲಿ ಮೊದಲ ಅರ್ಧಶತಕ ಬಾರಿಸಿದ್ದು ಅಲ್ಲದೆ ಆಪತ್ತ ಕಾಲದಲ್ಲಿ ಕೈ ಹಿಡಿದ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಜಸ್ಪ್ರೀತ್ ಬೂಮ್ರಾ ಪ್ಲೇಯರ್ ಆಫ್ ದಿ ಟೂರ್ನ್ ಮೆಂಟ್ ಆದರು.




error: Content is protected !!