ಆಸೀಸ್, ಬಾಂಗ್ಲಾ ಹೊರ ದಬ್ಬಿ ಸೆಮಿಗೆ ಅಫ್ಗನ್ ಎಂಟ್ರಿ

82

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವರ್ಲ್ಡ್ ಕಪ್ ನ ಸೂಪರ್ 8 ಪಂದ್ಯಗಳಲ್ಲಿ ಇಂದು ಮುಂಜಾನೆ ಅಫ್ಗಾನಿಸ್ಥಾನ್ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಅಫ್ಗನ್ 8 ರನ್ ಗಳ ಅಂತರದಿಂದ ಗೆಲುವು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಬಾಂಗ್ಲಾ ಜೊತೆಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಸಹ ಹೊರ ಬಿದ್ದಿದೆ.

ಮಳೆಯಿಂದ ಆಟಕ್ಕೆ ಒಂದಿಷ್ಟು ತೊಂದರೆ ಆಯಿತು. ಇದರ ನಡುವೆಯೂ ಅಫ್ಗನ್ ಜಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಶೀದ್ ಖಾನ್ ನಾಯಕತ್ವದ ಅಫ್ಗಾನಿಸ್ಥಾನ್ 5 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಗುರ್ಬಜ್ ಬಾರಿಸಿದ 43 ರನ್ ಗರಿಷ್ಠ ಸ್ಕೋರ್ ಆಗಿದೆ. ಬಾಂಗ್ಲಾ ಪರ ರಶೀದ್ ಹುಸೈನ್ 3 ವಿಕೆಟ್ ಪಡೆದು ಮಿಂಚಿದರು ಮುಸ್ತಫಿಝರ್ ರಹಮಾನ್, ತಸ್ಕಿನ್ ಅಹ್ಮದ್ ತಲಾ 1 ವಿಕೆಟ್ ಪಡೆದರು.

ಮಳೆಯಿಂದಾಗಿ ಡಕ್ವರ್ತ್ ಲೂಯಿಸ್ ನಿಯಮದಂತೆ 19 ಓವರ್ ಗಳಿಗೆ 114 ರನ್ ಟಾರ್ಗೆಟ್ ನೀಡಲಾಯಿತು. ಈ ಅಲ್ಪ ಗುರಿ ಬೆನ್ನು ಹತ್ತಿದ ಬಾಂಗ್ಲಾ ಪಡೆಯನ್ನು ರಶೀದ್ ಖಾನ್ ಬೌಲರ್ ಗಳು 105 ರನ್ ಗಳಿಗೆ ಕಟ್ಟಿ ಹಾಕಿದರು. ನಾಯಕ ರಶೀದ್ ಖಾನ್, ನವೀನ್ ಉಲ್ ಹಕ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಲಿಟನ್ ದಾಸ್ ಗಳಿಸಿದ 54 ರನ್ ಗಳ ಹೋರಾಟ ವ್ಯರ್ಥವಾಯಿತು. ಈ ಗೆಲುವಿನೊಂದಿಗೆ ಅಫ್ಗನ್ ತಂಡ ಮೊದಲ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿತು. ಸೂಪರ್ 8 ಹಂತದಲ್ಲಿ 2 ಪಂದ್ಯಗಳನ್ನು ಸೋತ ಆಸೀಸ್, ಮೂರೂ ಪಂದ್ಯಗಳನ್ನು ಸೋತ ಬಾಂಗ್ಲಾ ಟೂರ್ನಿಯಿಂದ ಹೊರ ಬಿದ್ದವು.




error: Content is protected !!