ಬಿಜೆಪಿಗೆ ಟಿಡಿಪಿ, ಜೆಡಿಯು ಬೆಂಬಲ

75

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇಂದು ನಡೆದ ಎನ್ ಡಿಎ ನಾಯಕರ ಸಭೆಯಲ್ಲಿ ಬಿಜೆಪಿಗೆ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹಾಗೂ ಜನತಾದಳ (ಯುನೈಟೆಡ್) ನಾಯಕ ನಿತೀಶಕುಮಾರ್ ಬೆಂಬಲ ಸೂಚಿಸಿದ್ದಾರೆ.

ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಇಬ್ಬರು ನಾಯಕರ ಜೊತೆಗೆ ಶಿವಸೇನೆಯ ನಾಯಕ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಎಲ್ ಜೆಪಿ(ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಅಮಿತ್ ಶಾ ಸೇರಿದಂತೆ ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು.

ಜೂನ್ 7ರ ಸಂಜೆ ರಾಷ್ಟ್ರಪತಿ ಭವನಕ್ಕೆ ಈ ನಾಯಕರೆಲ್ಲ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ನಂತರ ಮೋದಿ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಲೋಕಸಭೆ ಕದನದಲ್ಲಿ ಆಂಧ್ರದಲ್ಲಿ ಟಿಡಿಪಿ 16, ಬಿಹಾರದಲ್ಲಿ ಜೆಡಿಯು 12, ಎಲ್ ಜಿಪಿ(ರಾಮ ವಿಲಾಸ್) 5, ಮಹಾರಾಷ್ಟ್ರದಲ್ಲಿ ಶಿವಸೇನೆ 7 ಸ್ಥಾನ ಪಡೆದಿದ್ದು, ಇವರ ಬೆಂಬಲ ಬಿಜೆಪಿ ತುಂಬಾ ಪ್ರಮುಖವಾಗಿದೆ.


TAG


error: Content is protected !!