ದಾಖಲೆ ಬರೆದ ಟೀಂ ಇಂಡಿಯಾ ಮಹಿಳಾ ಪಡೆ

94

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ: ಸೌಥ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತೀಯ ಮಹಿಳಾ ಕ್ರಿಕೆಟ್ ಪಡೆ, ಇದೀಗ ಟೆಸ್ಟ್ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಎಂ.ಎ ಚಿದಂಬರಂ ಸ್ಟ್ರೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ಪಡೆ ಭರ್ಜರಿ ಬ್ಯಾಟಿಂಗ್ ಮಾಡಿದೆ. ಮೊದಲ ದಿನ ಶೆಫಾಲಿ ವರ್ಮಾ 194 ಬೌಲ್ ಗಳಲ್ಲಿ ದ್ವಿಶತಕ(205) ಸಾಧನೆ ಮಾಡಿದ್ದಾರೆ. ಇದು ವೇಗದ ದ್ವಿಶತಕವಾಗಿದೆ. ಸ್ಮೃತಿ ಮಂದಾನ 149 ಗಳಿಸಿ 2ನೇ ಶತಕದ ಸಾಧನೆ ಮಾಡಿದರು. ಇವರಿಬ್ಬರು 292 ರನ್ ಗಳ ಜೊತೆಯಾಟವಾಡಿದರು.

ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿತ್ತು. ಜೆಮಿಯಾ ರಾಡಿಗ್ರಾಸ್ 55 ರನ್ ಗಳಿಸಿದರು. ಇಂದು ಆಟ ಮುಂದುವರೆಸಿದ ತಂಡ, ನಾಯಕಿ ಕೌರ್ 69, ರಿಚಾ ಘೋಷ್ 86 ರನ್ ಬಾರಿಸಿ 600ರ ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಐತಿಹಾಸಿಕ ದಾಖಲೆ ಬರೆಯಿತು.

ಫೋಟೋ ಕೃಪಿ: ಬಿಸಿಸಿಐ ಟ್ವಿಟ್ಟರ್




error: Content is protected !!