ಯುವರತ್ನ ಟೀಂ ಕಡೆಯಿಂದ ಶುಭ ಸುದ್ದಿ

351

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತರಾಜಕುಮಾರ ನಟನೆಯ ಯುವರತ್ನ ಮೂವಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಪ್ಪು ಅಭಿಮಾನಿಗಳಿಗೆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಕುತೂಹಲವಿದೆ. ಇದರ ನಡುವೆ ಯುವರತ್ನ ಟೀಂ ಗುಡ್ ನ್ಯೂಸ್ ನೀಡಿದೆ.

ನಿರ್ದೇಶಕ ಸಂತೋಷ ಆನಂದರಾಮ ಟ್ವೀಟರ್ ಮೂಲಕ ಅಪ್ಪು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಯುವರತ್ನ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಅಭಿಮಾನಿಗಳ ಸಂಭ್ರಮ ಹೆಚ್ಚಿಸುವ ಕೆಲಸ ಮಾಡಲಾಗ್ತಿದೆ.

ಎಲ್ಲ ಅಂದುಕೊಂಡಂತೆ ಆಗಿದ್ರೆ ಏಪ್ರಿಲ್ 3ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ, ಕರೋನಾ ಎಲ್ಲವನ್ನೂ ಉಲ್ಟಾ ಮಾಡಿತು. ಹೀಗಾಗಿ ಸಿನಿ ರಸಿಕರಿಗೆ ನಿರಾಸೆ ಆಯ್ತು. ಈಗ ಹೊಸ ಪೋಸ್ಟರ್ ಸ್ವಲ್ಪ ಸಮಾಧಾನ ನೀಡಬಹುದಾಗಿದೆ.




error: Content is protected !!