ರಾಮನಗರ: ಜಿಪ್ ಲೈನ್ ಗೇಮ್ ಆಡಲು ಹೋಗಿ ಮಹಿಳೆ ಸಾವು

148

ಪ್ರಜಾಸ್ತ್ರ ಸುದ್ದಿ

ರಾಮನಗರ: ಜಿಪ್ ಲೈನ್ ಗೇಮ್ ಆಡಲು ಹೋಗಿ ಮಹಿಳೆಯೊಬ್ಬರು ಮೃತಪಟ್ಟು, ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಬೆಟ್ಟಹಳ್ಳಿ ಹತ್ತಿರ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ತಿಬೆಲೆಯ ನಿವಾಸಿ ರಂಜಿನಿ(35) ಮೃತ ದುರ್ದೈವಿ.

ಬೆಟ್ಟಹಳ್ಳಿ ಹತ್ತಿರ ಇರುವ ಜಂಗಲ್ ಟ್ರೈಲ್ಸ್ ರೆಸಾರ್ಟ್ ಗೆ ಸ್ನೇಹಿತರೊಂದಿಗೆ ಒಂದು ದಿನ ರಜೆ ಕಳೆಯಲು ಬಂದಿದ್ದರು. ಈ ವೇಳೆ ಜಿಪ್ ಲೈನ್ ಗೇಮ್ ಆಡಲು ಹೋಗಿದ್ದಾರೆ. ಆಗ ಲೈನ್ ಕಟ್ ಆಗಿ ಕೆಳಗೆ ಬಿದ್ದಿದ್ದಾರೆ. ಜೊತೆಯಲ್ಲಿದ್ದ ವ್ಯಕ್ತಿ ಸಹ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾಳೆ. ರೆಸಾರ್ಟ್ ಸಿಬ್ಬಂದಿ ಹಾಗೂ ಮಾಲೀಕರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಮೃತ ರಂಜಿನಿ ಪೋಷಕರು ಆರೋಪಿಸಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಂದರ್ಭಿಕ ಚಿತ್ರ ಬಳಸಲಾಗಿದೆ




error: Content is protected !!