ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಬೊಜ್ಜು(Obesity) ಸೇರಿದಂತೆ ಆರೋಗ್ಯ ಸಮಸ್ಯೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೈಲ ಕಡಿಮೆ ಸೇವನೆ ಅಭಿಯಾನದ ಕುರಿತು ಪ್ರಧಾನಿ ಮೋದಿ ಭಾನುವಾರ ಮಾತನಾಡಿದ್ದರು. ತಮ್ಮ ಮನ್ ಕೀ ಬಾತ್ 119ನೇ ಹಂಚಿಕೆಯಲ್ಲಿ ಈ ಬಗ್ಗೆ ಮಾತನಾಡಿ, ಎಣ್ಣೆ ಪದಾರ್ಥಗಳ ಸೇವನೆಯನ್ನು(Edible Oil Consumption) ಶೇಕಡ 10ರಷ್ಟು ಕಡಿಮೆ ಮಾಡುವ ಸಂಬಂಧ 10 ಜನರಿಗೆ ಸಾವಲು ನೀಡಿ. ಅವರು ಅಳವಡಿಸಿಕೊಳ್ಳಲು. ಅವರು ಮತ್ತೆ 10 ಜನರಿಗೆ ಸವಾಲು ನೀಡಲಿ ಎಂದು ಹೇಳಿದ್ದರು. ಇಂದು(ಸೋಮವಾರ) ತಮ್ಮ 10 ಹೆಸರುಗಳನ್ನು ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜಾ ಸಿನ್ಹಾ, ಮಹೇಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೇಂದ್ರ, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಬಹುಭಾಷಾ ನಟ ಮೋಹನ್ ಲಾಲ್, ಬಾಲಿವುಡ್ ನಟ ಆರ್.ಮಾಧವನ್ ಭೋಜಪುರಿ ಗಾಯಕ, ನಟ ನಿರಾಹುವಾ, ಗಾಯಕಿ ಶ್ರೇಯಾ ಘೋಷಾಲ್, ಒಲಿಂಪಿಕ್ ಪದಕ ವಿಜೇತರಾದ ವೇಟ್ ಲಿಫ್ಟರ್ ಮೀರಾಬಾಯಿ ಚಾನು, ಶೂಟರ್ ಮನು ಭಾಕರ್ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.
ಹೀಗೆ ರಾಜಕೀಯ, ಉದ್ಯಮ, ಸಿನಿಮಾ, ಕ್ರೀಡೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈ ಮೂಲಕ ಆಯಾ ಕ್ಷೇತ್ರಗಳ ಸಾಧಕರ ಅಭಿಮಾನಿಗಳು, ಬೆಂಬಲಿಗರು ಈ ಸವಾಲನ್ನು ಸ್ವೀಕರಿಸಲಿ ಹಾಗೂ ಹೆಚ್ಚಿನ ಪ್ರಚಾರ ಸಿಗಲಿ ಎನ್ನುವುದು ಆಗಿದೆ. ಇಂದಿನ ಆಹಾರ ಶೈಲಿ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಹೀಗಾಗಿ ಹಲವು ರೀತಿಯ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿದ್ದು, ಇದೊಂದು ಜಾಗೃತಿಯ ಅಭಿಯಾನವಾಗಿದೆ ಎಂದು ಹೇಳಲಾಗುತ್ತಿದೆ.