ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಸ್ಫೋಟಗೊಂಡು 270 ಜನರು ಮೃತಪಟ್ಟ ಘಟನೆ ಜೂನ್ 12ರಂದು ನಡೆದಿದೆ. ಇಡೀ ದೇಶವೇ ಈ ದುರಂತದ ಬಗ್ಗೆ ಇಂದಿಗೂ ಮರುಕ ಪಡುತ್ತಿದೆ. ಆದರೆ, ಏರ್ ಇಂಡಿಯಾಗೆ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳ ಪಾಲುದಾರ ಸಂಸ್ಥೆಯ ಕಚೇರಿಯಲ್ಲಿ ಪಾರ್ಟಿ ಮಾಡಿರುವುದು ವೈರಲ್ ಆಗಿದೆ.
ಸಿಂಗಪುರ ಮೂಲದ ಎಐಎಸ್ಎಟಿಎಸ್ ಕಂಪನಿಯು ಗುರುಗ್ರಾಮದ ಕಚೇರಿಯಲ್ಲಿ ಜೂನ್ 26ರಂದು ಪಾರ್ಟಿ ಮಾಡಿದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಇಬ್ಬರು ಹಿರಿಯ ಉಪಾಧ್ಯಕ್ಷರು ಹಾಗೂ ತರಬೇತಿ ಮುಖ್ಯಸ್ಥರ ರಾಜೀನಾಮೆಯನ್ನು ಪಡೆದಿದೆ. ಕಂಪನಿಯ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ. ಅಂದು ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯದ ಮೇಲೆ ವಿಮಾನ ಪತನಗೊಂಡಿದೆ. 38 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 270ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.