ಪ್ರಜಾಸ್ತ್ರ ಸುದ್ದಿ
ಸುಕ್ಮಾ(Sukma): ಸೋಮವಾರಷ್ಟೇ ಕರ್ನಾಟಕದಲ್ಲಿ ಭದ್ರತಾ ಪಡೆಗಳ ಗುಂಡಿಗೆ ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಯಾದ. ಇದರ ತೀವ್ರ ಚರ್ಚೆಯ ನಡುವೆ ಇಂದು ಛತ್ತೀಸಗಢದಲ್ಲಿ(Chhattisgarh) 10 ನಕ್ಸಲರ(Maoists) ಹತ್ಯೆಯಾಗಿದೆ. ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 10 ನಕ್ಸಲರಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಭೇಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಜಂಟಿ ತಂಡ ಶುಕ್ರವಾರ ಮುಂಜಾನೆ ಭೇಜಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ(Encounter) ಚಕಮಕಿಯಲ್ಲಿ 10 ನಕ್ಸಲರಗಳು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸಸ್ ರೈಫಲ್, ಎಕೆ-47(AK-47) ರೈಫಲ್, ಎಸ್ಎಲ್ಆರ್ ರೈಫಲ್ ವಶ ಪಡಿಸಿಕೊಳ್ಳಲಾಗಿದೆ. ಸುಕ್ಮಾ ಜಿಲ್ಲೆ ಸೇರಿ ಬಸ್ತರ್ ಪ್ರದೇಶದ 7 ಜಿಲ್ಲೆಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇದುವರೆಗೂ 207 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.