ಪ್ರಜಾಸ್ತ್ರ ಸುದ್ದಿ
ಕಾಸರಗೋಡು(Kasargod): ಜಿಲ್ಲೆಯ ನಿಲೇಶ್ವರ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಸಿಡಿಸಿದ ಪಟಾಕಿಯಿಂದ(Fireworks Accident) ಕಿಡಿ ಹೊತ್ತಕೊಂಡ ಪರಿಣಾಮ ಬರೋಬ್ಬರಿ 150ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಇದರಲ್ಲಿ ಸುಮಾರು 10 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕಣ್ಣೂರು, ಕಾಸರಗೋಡು ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರಲ್ಲಿ ಶೇಕಡ 80ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಿಲೇಶ್ವರದ(Neeleswaram) ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ದುರಂತ ನಡೆದಿದೆ. ಘಟನೆ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ. ಪಟಾಕಿ ಸಿಡಿತದಿಂದಲೇ ಅನಾಹುತ ಸೃಷ್ಟಿಯಾಗಿದ್ಯಾ, ಬೇರೆ ಏನಾದರೂ ನಡೆದಿದ್ಯಾ, ಸುತ್ತಮುತ್ತ ಇರುವ ಪಟಾಕಿ ಅಂಗಡಿಗಳಲ್ಲಿ ಏನಾದರೂ ಸ್ಫೋಟ ಸಂಭವಿಸಿ ಈ ಘಟನೆ ನಡೆದಿದ್ಯಾ ಏನು ಅನ್ನೋದರ ಕುರಿತು ತನಿಖೆ ನಡೆಸಲಾಗುತ್ತಿದೆ.