Ad imageAd image

7 ಲಕ್ಷದ ಕಾರಿಗೆ 2.8 ಕೋಟಿಯ ನಂಬರ್ ಪ್ಲೇಟ್..!

Nagesh Talawar
7 ಲಕ್ಷದ ಕಾರಿಗೆ 2.8 ಕೋಟಿಯ ನಂಬರ್ ಪ್ಲೇಟ್..!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಅಮರಾವತಿ(Amaravati): ಇವತ್ತಿನ ದುನಿಯಾದಲ್ಲಿ ಕಾರು ಕ್ರೇಜ್ ಜೊತೆಗೆ ಫ್ಯಾನ್ಸಿ ನಂಬರ್ ಕ್ರೇಜ್ ಸಹ ಅಷ್ಟೇ ಇದೆ. ಹೀಗಾಗಿ ದುಡ್ಡು ಇರುವವರು ಇಂಥಾ ಶೋಕಿ ಮಾಡುತ್ತಾರೆ. ಇಲ್ಲೊಬ್ಬ 7 ಲಕ್ಷ ರೂಪಾಯಿ ಕಾರಿಗೆ 2.8 ಕೋಟಿ ರೂಪಾಯಿ ನಂಬರ್ ಪ್ಲೇಟ್ ಹಾಕಿಸಿದ್ದಾನೆ. ಆಂಧ್ರಪ್ರದೇಶ ಮೂಲದ ಉದ್ಯಮಿ ಕಿರಣ್ ಕೊಲಕುಲ ಎಂಬುವರು ತಮ್ಮ ಹೊಸ ಮಾರುತಿ ಇಗ್ನಿಸ್ ಕಾರಿಗೆ ಇಷ್ಟೊಂದು ದುಬಾರಿ ಬೆಲೆಯ ನಂಬರ್ ಪ್ಲೇಟ್ ಹಾಕಿಸಿದ್ದಾರೆ.

ಬಿಗ್ ಬಾಯ್ಸ್ ಟಾಯ್ ಕಂಪನಿ ಮಾಲೀಕ ಜತಿನ್ ಅಹುಜಾ ಅವರ ಬಳಿಯಿದ್ದ ಡಿಡಿಸಿ 0001 ಸಂಖ್ಯೆಯ ನಂಬರ್ ಪ್ಲೇಟ್ ಹರಾಜಿಗೆ ಇಟ್ಟಿದ್ದರು. ಇದು 2.8 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಕಿರಣ್ ಕೊಲಕುಲ ಅನ್ನೋ ಉದ್ಯಮಿ ಇದನ್ನು ಖರೀದಿಸಿದ್ದಾರೆ. ಈ ಮೂಲಕ ದೇಶದಲ್ಲಿಯೇ ಅತಿ ದುಬಾರಿ ನಂಬರ್ ಪ್ಲೇಟ್ ಇದಾಗಿದೆ. ಎಚ್ಆರ್ 38ಬಿ 8888 ನಂಬರ್ ಪ್ಲೇಟ್ ಕಳೆದ ನವೆಂಬರ್ ನಲ್ಲಿ 1.17 ಕೋಟಿ ಮಾರಾಟವಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.

WhatsApp Group Join Now
Telegram Group Join Now
Share This Article