ಪ್ರಜಾಸ್ತ್ರ ಸುದ್ದಿ
ಬಲೂಚಿಸ್ತಾನ( balochistan): ಬಲೂಚಿಸ್ತಾನ ಪ್ರದೇಶದ ಕ್ವೆಟ್ವಾ ರೈಲು ನಿಲ್ದಾಣದಲ್ಲಿ(Railway Station) ಶನಿವಾರ ಬಾಂಬ್ ಸ್ಫೋಟಸಿದ್ದು, 21 ಜನರು ಮೃತಪಟ್ಟಿದ್ದಾರೆ. 46ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದೊಂದು ಆತ್ಮಹುತಿ ಬಾಂಬ್ ದಾಳಿ ಇರಬಹುದು ಎಂದು ಶಂಕಿಸಲಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ರೈಲು ನಿಲ್ದಾಣದ ಬುಕ್ಕಿಂಗ್ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯನ್ನು ಮುಖ್ಯಮಂತ್ರಿ ಸರ್ಫಾಜ್ ಬುಗ್ತಿ ಖಂಡಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಬೆಳಗ್ಗೆ 9ಕ್ಕೆ ಪೇಶಾವರಕ್ಕೆ ಜಾಫರ್ ಎಕ್ಸ್ ಪ್ರೆಸ್ ರೈಲು ಹೊರಡಬೇಕಿತ್ತು. ಅದು ಇನ್ನು ಬಂದಿರಲಿಲ್ಲ. ಅಷ್ಟರಲ್ಲಿ ಸ್ಫೋಟ(Bomb Blast) ನಡೆಸಲಾಗಿದೆ. ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡದೆ ಬಿಡುವುದಿಲ್ಲವೆಂದು ಸಿಎಂ ಹೇಳಿದ್ದಾರೆ. ಬಲೂಚ್ ಲಿಬರೇಷನ್ ಆರ್ಮಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.