ಪ್ರಜಾಸ್ತ್ರ ಸುದ್ದಿ
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಜನ ನಾಯಗನ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಟ ವಿಜಯ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನವರಿ 9 2026ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ಸಂಕ್ರಾಂತಿಗೆ ವಿಜಯ್ ಅಭಿಮಾನಿಗಳಿಗೆ ಭರ್ಜರಿ ಕಿಕ್ ಸಿಗಲಿದೆ. ಪೊಲೀಸ್ ಗೆಟಪ್ ನಲ್ಲಿರುವ ಫಸ್ಟ್ ಲುಕ್ ಸಖತ್ ಆಗಿ ಬಂದಿದೆ.
ನಟ ವಿಜಯ್ ಅವರ 69ನೇ ಸಿನಿಮಾ ಇದಾಗಿದೆ. ಅಲ್ಲದೆ ಇದು ಅವರ ಕೊನೆಯ ಚಿತ್ರ. ರಾಜಕೀಯಕ್ಕೆ ಧುಮಕಿರುವ ಕಾರಣ ಜನ ನಾಯಗನ್ ಸಿನಿಮಾ ಕೊನೆಯದಾಗಿದೆ. ಎಚ್.ವಿನೋತ್ ನಿರ್ದೇಶನ ಮಾಡುತ್ತಿದ್ದಾರೆ. ವೆಂಕೆಟ್ ಕೆ.ನಾರಾಯಣ ಅವರು ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ.