ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದ ನಟ ಕಿಚ್ಚ ಸುದೀಪ್, 11ನೇ ಆವೃತ್ತಿ ಕೊನೆಯದು ಎಂದು ಕಳೆದ ಜನವರಿ 20ರಂದು ಹೇಳಿದ್ದರು. ಇಂದು ದಿಢೀರ್ 12ನೇ ಆವೃತ್ತಿ ತಂಡದೊಂದಿಗೆ ಮಾಧ್ಯಮಗೋಷ್ಠಿ ನಡೆಸಲಾಯಿತು. ನಟ ಸುದೀಪ್ 12ನೇ ಆವೃತ್ತಿಗೂ ನಿರೂಪಣೆ ಮಾಡಲಿದ್ದಾರೆ. ಜೊತೆಗೆ ನಾಲ್ಕು ಸೀಸನ್ ಗಳಿಗೆ ಸಹಿ ಮಾಡಿದ್ದಾರೆ. ಆದರೆ, ಬಿಗ್ ಬಾಸ್ ಸೀಸನ್ 12 ಯಾವಾಗಿನಿಂದ ಶುರು ಎಂದು ಘೋಷಣೆ ಮಾಡಿಲ್ಲ.
ಅಂದು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದ್ದೆ. ಈಗ ಅಷ್ಟೇ ಪ್ರಮಾಣಿಕವಾಗಿ ಮರಳಿ ಬಂದಿದ್ದೇನೆ. ನನ್ನನ್ನು ಕರೆದ ರೀತಿ, ನೀವೇ ಬೇಕು ಎಂದು ಕೇಳಿದ ರೀತಿ ನಾನು ವಾಪಸ್ ಬರಲು ಕಾರಣ. ಸ್ಪರ್ಧಿಗಳ ವಿಚಾರದಲ್ಲಿ ವಾಹಿನಿಗೆ ಸ್ಪಷ್ಟತೆ ಇದ್ದರೆ ನನಗೆ ಯಾವ ಸಮಸ್ಯೆಯಿಲ್ಲ. ನಾನು ಯಾವತ್ತೂ ಷರತ್ತು ಹಾಕಿಲ್ಲ. ಕೆಲವು ಸಲಹೆ ನೀಡಿದ್ದೇನೆ. ಕನ್ನಡಕ್ಕೆ ಸ್ವಲ್ಪ ಪ್ರೀತಿ ತೋರಿಸಿ ಎಂದಿದ್ದೆ. ವಾಹಿನಿಂದ ಸಮಸ್ಯೆ ಬಂದಿಲ್ಲ. ಬರುವುದಿಲ್ಲ. ಮೇಲಿಂದ ಸ್ವಲ್ಪ ಆ ಪ್ರೀತಿ ಕಾಣಿಸುತ್ತಿರಲಿಲ್ಲ. ರೇಟಿಂಗ್ ಬರುತ್ತಿರುವುದು ನಮ್ಮ ಭಾಷೆ, ನಮ್ಮ ಜನರಿಂದ. ಬಿಗ್ ಬಾಸ್ ವಾರಂತ್ಯದ ಬಳಿಕ ಅಮ್ಮ ಬಹಳಷ್ಟು ಮಾತನಾಡುತ್ತಿದ್ದರು. ಅವರ ಇಷ್ಟದ ಕಾರ್ಯಕ್ರಮವಿದು ಎಂದರು.